ಜ.27 ರಿಂದ ಮೂರು ದಿನ `ಹಂಪಿ ಉತ್ಸವ' : ಇಲ್ಲಿದೆ ಕಾರ್ಯಕ್ರಮದ ಸಂಪೂರ್ಣ ಮಾಹಿತಿ

ಜ.27 ರಿಂದ ಮೂರು ದಿನ `ಹಂಪಿ ಉತ್ಸವ' : ಇಲ್ಲಿದೆ ಕಾರ್ಯಕ್ರಮದ ಸಂಪೂರ್ಣ ಮಾಹಿತಿ

ಹೊಸಪೇಟೆ : ವಿಶ್ವಪಾರಂಪರಿಕ ತಾಣ, ವಿಶ್ವವಿಖ್ಯಾತ ಹಂಪಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ವಿಜಯನಗರ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ಜ.27ರಿಂದ ಮೂರು ದಿನಗಳ ಕಾಲ ಹಂಪಿ ಉತ್ಸವ ನಡೆಯಲಿದೆ.

ಹಂಪಿ ಉತ್ಸವದ ಅಂಗವಾಗಿ ಮೂರು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲಾ ಪ್ರದರ್ಶನಗಳು, ಸಮಾರಂಭಗಳು ಹಂಪಿಯ ನಾಲ್ಕು ವೇದಿಕೆಗಳಲ್ಲಿ ನಡೆಯಲಿದೆ. ಎಂ.ಪಿ.ಪ್ರಕಾಶ್ ನಗರದಲ್ಲಿರುವ ಗಾಯಿತ್ರಿ ಪೀಠವು ಹಂಪಿ ಉತ್ಸವದ ಮುಖ್ಯ ವೇದಿಕೆ ಆಗಿರುತ್ತದೆ. ಹಾಗೂ ಉಳಿದಂತೆ ಎದುರು ಬಸವಣ್ಣ ವೇದಿಕೆ, ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ ವೇದಿಕೆ ಹಾಗೂ ಸಾಸುವೆಕಾಳು ಗಣಪ ವೇದಿಕೆಗಳಲ್ಲಿ ಸತತ ಮೂರು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

ಮುಖ್ಯ ವೇದಿಕೆಯಾದ ಗಾಯಿತ್ರಿ ಪೀಠದಲ್ಲಿ ಜ.27ರಂದು ಸಂಜೆ 6 ಗಂಟೆಗೆ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ಮುಜರಾಯಿ, ಹಜ್ ಮತ್ತು ವಕ್ಫ್ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಘನಉಪಸ್ಥಿತಿ ವಹಿಸಲಿದ್ದಾರೆ. ಪ್ರವಾಸೋದ್ಯಮ ಹಾಗೂ ಪರಿಸರ ಮತ್ತು ಜೀವಶಾಸ್ತç ಇಲಾಖೆ ಸಚಿವರಾದ ಆನಂದ್ ಸಿಂಗ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸುವರು.

ಕಾರ್ಯಕ್ರಮದಲ್ಲಿ ಕಂದಾಯ ಸಚಿವರಾದ ಆರ್.ಆಶೊಕ್, ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲು, ಗೃಹ ಸಚಿವರಾದ ಅರಗ ಜ್ಞಾನೇಂದ್ರ, ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜು, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ.ಸುನೀಲ್ ಕುಮಾರ್ ಹಾಗೂ ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರಾದ ಹಾಲಪ್ಪ ಬಸಪ್ಪ ಆಚಾರ್ ಉಪಸ್ಥಿತರಿರುವರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಳ್ಳಾರಿ ಸಂಸದರಾದ ವೈ. ದೇವೇಂದ್ರಪ್ಪ, ದಾವಣಗೆರೆ ಸಂಸದರಾದ ಜಿ.ಎಂ.ಸಿದ್ಧೇಶ್ವರ, ಹೂವಿನಹಡಗಲಿ ಶಾಸಕರಾದ ಪಿ.ಟಿ.ಪರಮೇಶ್ವರ ನಾಯ್ಕ, ಕೂಡ್ಲಿಗಿ ಶಾಸಕರಾದ ಎನ್.ವೈ.ಗೋಪಾಲಕೃಷ್ಣ, ಹಗರಿಬೊಮ್ಮನಹಳ್ಳಿ ಶಾಸಕರಾದ ಭೀಮಾನಾಯ್ಕ ಎಲ್.ಬಿ.ಪಿ, ಹರಪನಹಳ್ಳಿ ಶಾಸಕರಾದ ಜಿ.ಕರುಣಾಕರ ರೆಡ್ಡಿ, ಜಗಳೂರು ಶಾಸಕ ಹಾಗೂ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಸ್.ವಿ.ರಾಮಚಂದ್ರ, ವಿಧಾನಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ್ ಬಿ.ಪಾಟೀಲ, ಶಶೀಲ್ ಜಿ.ನಮೋಶಿ, ವೈ.ಎಂ.ಸತೀಶ್, ಕಮಲಾಪುರ ಪುರಸಭೆ ಅಧ್ಯಕ್ಷರಾದ ಸಯ್ಯದ್ ಅಮಾನುಲ್ಲಾ ಹಾಗೂ ಹಂಪಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಿ.ಡಿ.ಹೇಮಗಿರಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಅಪರ ಮುಖ್ಯ ಕಾರ್ಯದರ್ಶಿಗಳಾದ ಕಪಿಲ್ ಮೋಹನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗಳಾದ ಡಾ.ಎನ್.ಮಂಜುಳಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ತುಲಸಿ ಮದ್ದಿನೇನಿ, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಕೃಷ್ಣ ಬಾಜಪೇಯಿ, ವಿಜಯನಗರ ವಲಯ ಪೊಲೀಸ್ ಮಹಾ ನಿರೀಕ್ಷಕ ಬಿ.ಎಸ್.ಲೋಕೇಶ್ ಕುಮಾರ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕರಾದ ವಿ.ರಾಮ್ ಪ್ರಸಾತ್ ಮನೋಹರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಹೊಸಪೇಟೆ ನಗರಸಭೆ ಅಧ್ಯಕ್ಷರಾದ ಸುಂಕಮ್ಮ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಶೋಕ್ ಜೀರೆ, ಹಂಪಿಯ ಶ್ರೀ ವಿರೂಪಾಕ್ಷ ವಿದ್ಯಾರಣ್ಯ ಮಠದ ವಿದ್ಯಾರಣ್ಯ ಭಾರತಿ ಸ್ವಾಮೀಜಿ, ಹಂಪಿ ಹೇಮಕೂಟ ಸಿಂಹಾಸನಾಧೀಶ್ವರ ಜಗದ್ಗುರು ಕೊಟ್ಟೂರು ಬಸವಲಿಂಗ ಸ್ವಾಮೀಜಿ, ಗಾಯಿತ್ರಿ ಪೀಠದ ದಯಾನಂದಪುರಿ ಸ್ವಾಮೀಜಿ ಹಾಗೂ ಆನೆಗುಂದಿ ರಾಜವಂಶಸ್ಥ ಶ್ರೀ ಕೃಷ್ಣದೇವರಾಯ ಅವರು ಪಾಲ್ಗೊಳ್ಳಲಿದ್ದಾರೆ.

ಹಾಗೂ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಶ್ರೀಹರಿ ಬಾಬು, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬೋಯರ್ ಹರ್ಷಲ್ ನಾರಾಯಣರಾವ್ ಭಾಗಿಯಾಗಲಿದ್ದಾರೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

ಜ.27ರಂದು ಮುಖ್ಯ ವೇದಿಕೆ ಗಾಯಿತ್ರಿ ಪೀಠದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳು: ಸಂಜೆ 4ಕ್ಕೆ ಕೇಶವ ಮತ್ತು ಮೀರಾ ಅವರಿಂದ ಕೊಳಲು ವಾದನ, 4.10ರಿಂದ ಚಿತ್ರಾ ಮತ್ತು ತಂಡದವರಿAದ ರಂಗಗೀತೆಗಳು, 4.25ರಿಂದ ಚಿತ್ಪಾವನ ಮಹಿಳಾ ಯಕ್ಷಗಾನ ಮಂಡಳಿಯಿAದ ಯಕ್ಷಗಾನ, 4.40ರಿಂದ ಆನಂದ ಮಾದಲಗೇರಿ ತಂಡದವರಿAದ ಸುಗಮ ಸಂಗೀತ, 4.55ರಿಂದ ರೇಖಾ ಸವದಿ ಅವರಿಂದ ಸಿನಿಮಾ ಗೀತ ಗಾಯನ, 5.15ರಿಂದ ಶಿವಲೀಲಾ ಟ್ರಸ್ಟ್ ವತಿಯಿಂದ ಸಮೂಹ ನೃತ್ಯ, ಸಂಜೆ 6 ಗಂಟೆಗೆ ಸಮಾರಂಭ ಉದ್ಘಾಟನೆಯಾಗುವ ವೇಳೆ ಕನ್ನಡ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ವಿದ್ಯಾರ್ಥಿಗಳಿಂದ ನಾಡಗೀತೆ, 7.30ಕ್ಕೆ ಅನುರಾಧ ವಿಕ್ರಾಂತ್ ತಂಡದವರಿAದ ನೃತ್ಯ ರೂಪಕ, 8ಕ್ಕೆ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಂಡದವರಿAದ ಸಂಗೀತ ರಸಸಂಜೆ, 10ರಿಂದ ರಾಘವೇಂದ್ರ ಆಚಾರ್ ಅವರಿಂದ ಸ್ಟಾö್ಯಂಡ್ ಅಪ್ ಕಾಮಿಡಿ ಹಾಗೂ ಕಾರ್ಯಕ್ರಮದ ಕೊನೆಯಲ್ಲಿ 10.30ರಿಂದ ಅಂಕಿತ್ ತಿವಾರಿ ಹಾಗೂ ತಂಡದಿAದ ಬಾಲಿವುಡ್ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ಎದುರು ಬಸವಣ್ಣ ವೇದಿಕೆಯಲ್ಲಿ ನಡೆಯಲಿರುವ ಕಾರ್ಯಕ್ರಮಗಳು: ಸಂಜೆ 4ರಿಂದ ಎಸ್.ಕೆ.ಆರ್.ಜಿಲಾನಿ ಭಾಷಾ ತಂಡದವರಿAದ ಸಮೂಹ ನೃತ್ಯ, 4.15ರಿಂದ ಭಾಗ್ಯಶ್ರೀ.ಎಂ.ಪಿ ಅವರಿಂದ ಸುಗಮ ಸಂಗೀತ, 4.25ರಿಂದ ವೇಮಗಲ್ ನಾರಾಯಣಸ್ವಾಮಿ ಅವರಿಂದ ಜಾನಪದ ಸಂಗೀತ, 4.35ರಿಂದ ಪುನಾ ಸುರೇಶ್ ಜಿ.ಪದಕಿ ಅವರಿಂದ ಹಿಂದೂಸ್ತಾನಿ ಶಾಸ್ತಿçÃಯ ಸಂಗೀತ, 4.50ರಿಂದ ಸುಂಕದಕಟ್ಟೆ ಡಾ.ನಾಗೇಶ್ ಕೆ.ಎನ್ ತಂಡದಿAದ ಜಾನಪದ ಗೀತೆಗಳು, 5ರಿಂದ ಶಾಂತಲಾ ನೃತ್ಯಾಲಯಂ ಅವರಿಂದ ಭರತನಾಟ್ಯ, 5.15ರಿಂದ ಗೋವಿಂದಪ್ಪ ಜೋಗಿಮಟ್ಟಿರಿಂದ ಟಕೂರಿ ವಾದ್ಯ, 5.30ರಿಂದ ಅಮೋಘವರ್ಷ ಅವರಿಂದ ಫ್ಯೂಜನ್ ಸಂಗೀತ, 5.45ರಿಂದ ಕೈಲಾಸ್ ಕಲಾಧಾರ ಕಲ್ಚರಲ್ ಮತ್ತು ಚಾರಿಟೇಬಲ್ ಟ್ರಸ್ಟ್ವತಿಯಿಂದ ನೃತ್ಯರೂಪಕ, 6 ಗಂಟೆಗೆ ಅಂಜನಾ ಪಿ.ರಾವ್ ಅವರಿಂದ ಕರ್ನಾಟಕ ಸಂಗೀತ, 6.15ಕ್ಕೆ ಸಿದ್ದಿವಿನಾಯಕ ಹವ್ಯಾಸಿ ಯಕ್ಷಗಾನ ಕಲಾಸಂಘದಿAದ ಯಕ್ಷಗಾನ, 6.30ಕ್ಕೆ ಕೃತಿಕಾ ನಾಡಗೇರರಿಂದ ಹಿಂದೂಸ್ತಾನಿ ಶಾಸ್ತಿçÃಯ ಸಂಗೀತ, 6.45ಕ್ಕೆ ಸೂರ್ಯ ಕಲಾ ಟ್ರಸ್ಟ್ ವತಿಯಿಂದ ಸಮೂಹ ನೃತ್ಯ, 7ಕ್ಕೆ ನೂಪುರ ಫೈನ್ ಆರ್ಟ್ಸ್ ಅಕಾಡೆಮಿಯಿಂದ ಕ್ಲಾಸಿಕಲ್ ನೃತ್ಯ, 7.15ಕ್ಕೆ ಸಂಗೀತ ರವೀಂದ್ರನಾಥ್ ಅವರಿಂದ ಚಿತ್ರಗೀತೆಗಳ ಗಾಯನ, 7.30ಕ್ಕೆ ಜ್ಯೋತಿ ವಾದಿರಾಜ ಗಲಗಲಿಯಿಂದ ಭರತನಾಟ್ಯ, 7.45ಕ್ಕೆ ಚಂದ್ರಕಲಾ ತಂಡದಿAದ ಭರತನಾಟ್ಯ, 8 ಗಂಟೆಗೆ ಎಂ.ಡಿ. ಪಲ್ಲವಿ ತಂಡದವರಿAದ ಗೀತ ಗಾಯನ, 8.45ಕ್ಕೆ ಶಾಲಿನಿ ಆತ್ಮಭೂಷಣ್‌ರವರ ಶಾಸ್ತಿçÃಯ ನೃತ್ಯ, 9.15ಕ್ಕೆ ನಾದವಿದ್ಯಾಲಯ ಅಕಾಡೆಮಿಯಿಂದ ಭರತನಾಟ್ಯ, 9.30ಕ್ಕೆ

ಸರಸ್ವತಿ ಸಂಗೀತ ವಿದ್ಯಾಲಯದಿಂದ ವೀಣಾವಾದನ, 9.45ರಿಂದ ನಂದ ಕಿಶೋರ್‌ರವರ ನೃತ್ಯ ರೂಪಕ, 10ಕ್ಕೆ ಕರ್ನೂಲ್ ಲಾಸ್ಯ ಇನ್ಸಿಟ್ಯೂಟ್ ಆಫ್ ಕೂಚಿಪುಡಿ ಡ್ಯಾನ್ಸ್ ವತಿಯಿಂದ ಕುಚಿಪುಡಿ, 10.15ಕ್ಕೆ ಜಾನಪದ ನೆರಳು, ಕಲೆ ಹಾಗೂ ಸಾಂಸ್ಕೃತಿಕ ನಿರ್ವಹಣೆ ಹಾಗೂ ಸಂಶೋಧನಾ ಕೇಂದ್ರದಿAದ ಜಾನಪದ ನೃತ್ಯ, 10.30ಕ್ಕೆ ಚಿರುಶ್ರೀರಿಂದ ಗಜಲ್ ಗೋಷ್ಠಿ, 10.45ಕ್ಕೆ ಯಶೋಧ ತಂಡದಿAದ ಕನಕ ನೃತ್ಯ ರೂಪಕ, 11ಕ್ಕೆ ಸ್ನೇಹಾ ಲತಾ ಸಾಂಸ್ಕೃತಿಕ ಸಂಘದಿAದ ಸಾಂಸ್ಕೃತಿಕ ಕಾರ್ಯಕ್ರಮ, 11.15ಕ್ಕೆ ರಾಜಪ್ರಭು ದೋತ್ರೆರವರ ಹಿಂದೂಸ್ತಾನಿ ಸಂಗೀತ, 11.30ಕ್ಕೆ ಸಿದ್ದು ಮೋಟೆರವರ ಡೊಳ್ಳಿನ ಪದಗಳು, 11.45ಕ್ಕೆ ವೆಂಕಪ್ಪ ಅಂಬಾಜಿ ಸುಗತೇಕರ್‌ರಿಂದ ಗೊಂದಲಿಗರ ಹಾಡು ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.

ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮಗಳು:

ಸಂಜೆ 4ರಿಂದ ಅನುರಾಧ ಅವರಿಂದ ಸುಗಮ ಸಂಗೀತ, 4.15ಕ್ಕೆ ಕಿಂಡ್ರಿ ಲಕ್ಷಿö್ಮÃಪತಿ ಅವರ ಸುಡುಗಾಡು ಸಿದ್ದರ ಕೈಚಳಕ, 4.30ಕ್ಕೆ ರಕ್ಷಾ ಕಲ್ಬರಲ್ ಅಂಡ್ ಸೋಷಿಯಲ್ ಅಕಾಡೆಮಿಯಿಂದ ಸಮೂಹ ನೃತ್ಯ, 4.45ಕ್ಕೆ ಹೆಚ್.ಎಂ.ಲಲಿತರಿAದ ಹಿಂದೂಸ್ತಾನಿಶಾಸ್ತಿçÃಯ ಸಂಗೀತ, 5ಕ್ಕೆ ಮಹಮ್ಮದ್ ಇಮ್ತಿಯಾಜ್‌ರಿಂದ ಗೀತಗಾಯನ, 5.15ಕ್ಕೆ ಜಿ.ಕೆ.ಅಶ್ವತ್ ಹರಿದಾಸ್‌ರವರ ಭರತನಾಟ್ಯ ರೂಪಕ, 5.30ಕ್ಕೆ ಹೆಚ್.ಎಂ.ವಾಗೇಶ್‌ರವರ ಸುಗಮ ಸಂಗೀತ, 5.45ಕ್ಕೆ ಎನ್.ಸಾಯಿ ಮಧುರ ಅವರ ಕೀರ್ತನೆ, 6ಕ್ಕೆ ಉಪ್ಪಾರ ಹನುಮಂತಪ್ಪರಿAದ ಜಾನಪದ ಗೀತೆಗಳು, 6.15ಕ್ಕೆ ಐಶ್ವರ್ಯ ದೇಸಾಯಿ ಅವರ ಶಾಸ್ತಿçÃಯ ಸಂಗೀತ, 6.30ಕ್ಕೆ ಕೆ.ರೇವಣಸಿದ್ದಾಚಾರ್‌ರಿಂದ ತಬಲಾ ಸೋಲೋ,

6.45ಕ್ಕೆ ಅಕ್ಕಮಹಾದೇವಿ ಮಹಿಳಾ ಸಾಂಸ್ಕೃತಿಕ ಸಂಘದಿAದ ಜಾನಪದ ಸಂಗೀತ, 7ಕ್ಕೆ ಪುಷ್ಪಾಂಜಲಿ ನಾಟ್ಯಕಲಾ ಅಕಾಡೆಮಿಯಿಂದ ನೃತ್ಯ ರೂಪಕ, 7.15ಕ್ಕೆ ಭಾಗ್ಯಶ್ರೀ ಗೌಡರಿಂದ ಸುಗಮ ಸಂಗೀತ, 7.30ಕ್ಕೆ ಚಲುವಾದಿ ಬಸವರಾಜಪ್ಪರವರ ಶಹನಾಯಿ ವಾದನ, 7.45ಕ್ಕೆ ಗೊಂದಲಿಗರ ಹನುಮಂತಪ್ಪರಿAದ ಗೊಂದಲಿಗರ ಕುಣಿತ, 8ಕ್ಕೆ ಹೂವಿನಗಡಗಲಿ ಬೆಟ್ಟದ ಮಲ್ಲೇಶ್ವರ ಭರತನಾಟ್ಯ ಕಲಾ ಸಂಘದಿAದ ಭರತನಾಟ್ಯ, 8.15ಕ್ಕೆ ಭೂಮಿಕಾ ತಂಡದಿAದ ಗೀತಗಾಯನ, 8.30ಕ್ಕೆ ಬದರಿನಾಥ ಮೂಡಬಿದ್ರಿರವರ ಪಿಟೀಲು ವಾದನ, 8.45ಕ್ಕೆ ಬಸವರಾಜ ಮೋತಿರವರ ಸುಗಮ ಸಂಗೀತ, 9ಕ್ಕೆ ಹಾಲೇಶಪ್ಪ ಗಡ್ಡಿಯವರ ಹಿಂದೂಸ್ತಾನಿ ಸಂಗೀತ, 9.15ಕ್ಕೆ ಎ.ತಿಂದಪ್ಪ ಅವರ ವಚನಗಾಯನ, 9.30ಕ್ಕೆ ಗೊಂದಲಿಗರ ರಾಮಪ್ಪರ ಗೊಂದಲಿಗರ ಪದ, 9.40ಕ್ಕೆ ಹೊಸಪೇಟೆ ನಗರ ಘಟಕದ ವಿಕಲಚೇತನರ ಸಂಘದಿAದ ಸುಗಮ ಸಂಗೀತ, 9.45ಕ್ಕೆ ಬಿ.ನರಸಿಂಹಪ್ಪನವರ ತತ್ವಪದ, 10ಕ್ಕೆ ರಾಜ ರಾಜೇಶ್ವರಿ ಸಂಗೀತ ಪಾಠ ಶಾಲೆಯಿಂದ ಜಾನಪದ ಗೀತೆಗಳು, 10.10ಕ್ಕೆ ಡಾ.ಟಿ.ಭವ್ಯರಾಣಿ ಅವರಿಂದ ಹಿಂದೂಸ್ಥಾನಿ ಶಾಸ್ತಿçÃಯ ಸಂಗೀತ, 10.30ಕ್ಕೆ ಹಂಪಿ ರಂಜು ಆರ್ಟ್ಸ್ ಯೋಗ ಟ್ರಸ್ಟ್ ವತಿಯಿಂದ ಯೋಗನೃತ್ಯ, 10.45ಕ್ಕೆ ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್‌ನಿಂದ ನೃತ್ಯ, 11ಕ್ಕೆ ಮಯೂಕಳಿಂದ ಭರತನಾಟ್ಯ, 11.15ಕ್ಕೆ ಗೌರವ್ ಸುಧಾ ಮುರಳಿರವರ ದೇಶಭಕ್ತಿಗಾಯನ, 11.25ಕ್ಕೆ ಕೆ.ಎನ್.ನಾಗಚಂದ್ರಿಕಾ ಭಟ್‌ರ ಜಾನಪದ ಸಂಗೀತ, 11.35ಕ್ಕೆ ಕವಿತಾರಿಂದ ಸುಗಮ ಸಂಗೀತ, 11.45ಕ್ಕೆ ರಚನಾರಿಂದ ಭರತನಾಟ್ಯ ಕಾರ್ಯಕ್ರಮಗಳು ನಡೆಯಲಿವೆ.

ಸಾಸಿವೆಕಾಳು ಗಣಪ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮಗಳು: ಸಂಜೆ 4ರಿಂದ

ಐಶ್ವರ್ಯ ಬೂದಿಹಾಳ ಅವರ ಸುಗಮ ಸಂಗೀತ, 4.10ಕ್ಕೆ ನಂದಿನಿ.ಎA ಅವರ ಕೂಚಿಪುಡಿ, 4.25ಕ್ಕೆ ಮಲ್ಲಿಕಾರ್ಜುನ್‌ರ ಸುಗಮ ಸಂಗೀತ, 4.35ಕ್ಕೆ ಪ್ರಕೃತಿ ರೆಡ್ಡಿರ ಸುಗಮ ಸಂಗೀತ, 4.50ಕ್ಕೆ ಕೆ.ಸಿ.ಪರಶುರಾಮರ ಜಾನಪದ ಸಂಗೀತ, 5ಕ್ಕೆ ರಾಜೀವ್ ತಾರನಾಥ್‌ರ ಸರೋದ್ ವಾದನ, 5.15ಕ್ಕೆ ಸುಧಾ ಮುತ್ನಾಳ್‌ರಿಂದ ಜಾನಪದ ನೃತ್ಯ, 5.30ಕ್ಕೆ ತಾಂಡವ ನೃತ್ಯ ಕಲಾ ಟ್ರಸ್ಟ್ ವತಿಯಿಂದ ನೃತ್ಯ, 5.45ಕ್ಕೆ ಗಣೇಶ್ ತಂಡದಿAದ ಕ್ಲಾರಿಯೋಟ್ ವಾದನ, 6ಕ್ಕೆ 6ಮಹಮ್ಮದ್ ರಿಜ್ವಾನ್ ಭಾವಗೀತೆ, 6.15ಕ್ಕೆ ಕೆ.ಶ್ರೀನಿವಾಸ ಅವರ ಸುಗಮ ಸಂಗೀತ, 6.30ಕ್ಕೆ ಡಾ.ಕುಬೇಂದ್ರ ಶಾಸ್ತಿçà ಅವರ ಕಥಾ ಕೀರ್ತನಾ, 6.45ಕ್ಕೆ ಕೃಷ್ಣಪ್ಪ ಜೋಗಿ ಅವರಿಂದ ವಚನಸಂಗೀತ, 7ಕ್ಕೆ ಬಿ.ಯುವರಾಜಗೌಡರಿಂದ ವಚನ ಗಾಯನ, 7.15ಕ್ಕೆ ಗಿರಿಮಲ್ಲಪ್ಪ ಸತ್ಯಪ್ಪ ಭಜಂತ್ರಿಗಳಿAದ ವಚನಗಾಯನ, 7.30ಕ್ಕೆ ಪಾಂಡುರAಗ ಸಿಳಿಕ್ಯಾತರ್ ತೊಗಲುಗೊಂಬೆ ಪ್ರದರ್ಶನ, 8ಕ್ಕೆ ಶೃತಿ ಸ್ಮೃತಿ ಸಾಂಸ್ಕೃತಿಕ ಕಲಾ ಸಂಘದಿAದ ನಾಟಕ, 9ಕ್ಕೆ ಗಂಗಾವತಿ ನಾಗರಾಜ ಇಂಗಳಿಗಿ ತಂಡದಿAದ ರಕ್ತರಾತ್ರಿ ನಾಟಕ, 10ಕ್ಕೆ ಮರಿಯಮ್ಮನಹಳ್ಳಿ ನಾಗರತ್ನಮ್ಮರಿಂದ ನಾಟಕ, 11ಕ್ಕೆ ಕೂಡ್ಲಿಗಿ ವಿನಾಯಕ ಜ್ಯೋತಿ ಕಲಾ ಟ್ರಸ್ಟ್ ವತಿಯಿಂದ ಬಯಲಾಟ ಕಾರ್ಯಕ್ರಮ ನಡೆಯಲಿದೆ.