ಜುಲೈ 8ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ 'ಛೋಟಾ ಬಾಂಬೆ' ಸಿನಿಮಾ

ಜುಲೈ 8ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ 'ಛೋಟಾ ಬಾಂಬೆ' ಸಿನಿಮಾ

ಬೆಂಗಳೂರು: 'ಛೋಟಾ ಬಾಂಬೆ' ಕನ್ನಡ ಸಿನಿಮಾ ಜುಲೈ 8ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಚಿತ್ರದ ನಿರ್ಮಾಪಕರೂ ಆದ ಯೂಸುಫ್ ಖಾನ್ ಅವರೇ ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಉತ್ತರ ಕರ್ನಾಟಕದ ಪ್ರಮುಖ ನಗರಗಳಲ್ಲಿ ಒಂದಾದ ಹುಬ್ಬಳ್ಳಿಯೇ 'ಛೋಟಾ ಬಾಂಬೆ'.

ಹೂಬಳ್ಳಿಯಂತಿದ್ದ ಊರು ಹುಬ್ಬಳ್ಳಿಯಾಗಿ ರೂಪುಗೊಂಡಿದ್ದು, ಅಲ್ಲಿ ನಡೆದ ಘಟನೆ, ರೌಡಿಯಿಸಂ, ಅಪರಾಧ ಜಗತ್ತು… ಹುಬ್ಬಳ್ಳಿಯನ್ನು ಮತ್ತೆ ಹೂಬಳ್ಳಿ ಮಾಡೋ ಪರಿಕಲ್ಪನೆಯ ಕಥಾಹಂದರವುಳ್ಳ ಈ ಸಿನಿಮಾದಲ್ಲಿ ಸೂರಜ್ ಸಾಸನೂರ ಮತ್ತು ಅಭಿಷೇಕ್ ಜಾಲಿಹಾಳ ನಾಯಕ ನಟರಾಗಿ ನಟಿಸಿದ್ದಾರೆ.

ಚಿತ್ರದಲ್ಲಿ ಬಹುತೇಕ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಹೀರೋ, ಹೀರೋಯಿನ್, ವಿಲನ್, ಸಹ ಪಾತ್ರಧಾರಿಗಳು ಹೀಗೆ ಬಹುತೇಕರು ಉತ್ತರ ಕರ್ನಾಟಕ್ಕೆ ಸೇರಿದವರಾಗಿದ್ದಾರೆ. ಹುಬ್ಬಳ್ಳಿ, ಧಾರವಾಡ, ಮುಂಡಗೋಡ ಸೇರಿ ಉತ್ತರ ಕರ್ನಾಟಕದ ಹಲವೆಡೆ ಚಿತ್ರೀಕರಣ ಮಾಡಲಾಗಿದೆ. ಉತ್ತರ ಕರ್ನಾಟಕದ ಕಥೆ, ಉತ್ತರ ಕರ್ನಾಟಕದವರ ಅಭಿನಯ, ಉತ್ತರ ಕರ್ನಾಟಕದವರ ನಿರ್ದೇಶನ ಒಳಗೊಂಡ ಈ ಚಿತ್ರವನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.