ಕಳ್ಳರಿಂದ ಕದ್ದ ಚಿನ್ನಾಭರಣ ಪಡೆದ ಆರೋಪ : ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬಾಬು ಅರೆಸ್ಟ್

ಬೆಂಗಳೂರು : ಕಳ್ಳರಿಂದ ಕದ್ದ ಚಿನ್ನಾಭರಣ ಪಡೆದುಕೊಳ್ಳುತಿದ್ದ ಆರೋಪದ ಮೇಲೆ ಮತ್ತೆ' ಅಟ್ಟಿಕಾ ಗೋಲ್ಡ್ ಕಂಪನಿಯ ಮಾಲೀಕ ಅಟ್ಟಿಕಾ ಬಾಬು' ಬಂಧಿಸಲಾಗಿದೆ
ಅಟ್ಟಿಕಾ ಬಾಬು ವಿರುದ್ಧ IPC section 448, 342, 307, 386, 427, 498A, 506 ಮತ್ತು ವರದಕ್ಷಿಣೆ ಕಿರುಕುಳ ಆರೋಪದಡಿ ಕೇಸ್ . ಕೇಸ್ ಸಂಬಂಧಿಸಿ, ಆಂಧ್ರದ ಅನಂತಪುರ ಪೊಲೀಸರಿಂದ ಬೆಂಗಳೂರಿಗೆ ಆಗಮಿಸಿ ಸ್ಥಳೀಯ ಪೊಲೀಸರ ಸಹಾಯದಿಂದ ಅಟ್ಟಿಕಾ ಬಾಬು ವಶಕ್ಕೆ ಪಡೆದಿದ್ದಾರೆ. ಈ ಹಿಂದೆ ಕದ್ದ ಬಂಗಾರ ಖರೀದಿ ಮಾಡಿದ್ದ ಆರೋಪದಲ್ಲೂ ಹಲವಾರು ಬಾರಿ ಅಟ್ಟಿಕಾ ಬಾಬು ಅರೆಸ್ಟ್ ಆಗಿದ್ದರು.
ಇದೀಗ ಅನಂತಪುರ ಬಳಿಯ ಯಲ್ಲೂರಿನ ಶೇಕ್ ಮೀನಾಜ್ ಎಂಬ ಮಹಿಳೆ ಆಯೂಬ್ ಅಲಿಯಾಸ್ ಅಟ್ಟಿಕಾ ಬಾಬು ತನ್ನನ್ನು ಮದುವೆ ಆಗಿ ಮೋಸ ಮಾಡಿದ್ದಾನೆ.
ಡಿಸೆಂಬರ್ 12ರಂದು ಯಲ್ಲೂರಿಗೆ ಬಂದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿ ಮನೆಯಲ್ಲಿ ಇದ್ದ ವಸ್ತುಗಳನ್ನು ದ್ವಂಸ ಮಾಡಿದ್ದಾರೆ. ಕೊಲೆಗೆ ಯತ್ನ ಮಾಡಲಾಗಿದೆ ಎಂದು ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಪೊಲೀಸರು IPC section 448, 342, 307, 386, 427, 498A, 506 ಮತ್ತು ವರದಕ್ಷಿಣೆ ಕಿರುಕುಳ ಆರೋಪದಡಿ ಕೇಸ್ ದಾಖಲಾದ ಬೆನ್ನಲ್ಲೇ ಅಟ್ಟಿಕಾ ಗೋಲ್ಡ್ ಕಂಪನಿಯ ಮಾಲೀಕರನ್ನು ಬಂಧಿಸಲಾಗಿದೆ