ಜನ್ಮದಿನದಂದು ಸಂಭ್ರಮಾಚರಣೆ ಬೇಡ: ಪ್ರಲ್ಹಾದ್ ಜೋಶಿ ಮನವಿ
ಧಾರವಾಡ: ನ.27ರಂದು ಕೇಂದ್ರ ಸಂಸದೀಯ ವ್ಯವಹಾರ & ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಅವರ ಜನ್ಮದಿನ. ಈ ಹಿನ್ನೆಲೆ ಕೇಂದ್ರ ಸಚಿವರು ತಮ್ಮ ಬೆಂಬಲಿಗರು, ಕಾರ್ಯಕರ್ತರು, ಅಭಿಮಾನಿಗಳು & ಸಾರ್ವಜನಕರಿಗೆ ವಿನಂತಿಯ ಸಂದೇಶವನ್ನು ರವಾನಿಸಿದ್ದಾರೆ. ಈ ಬಾರಿಯ ಯಾರೂ ನನ್ನ ಜನ್ಮದಿನದಂದು ಬ್ಯಾನರ್, ಹೋರ್ಡಿಂಗ್ಸ್, ಕಟ್-ಔಟ್ & ಯಾವುದೇ ಜನ್ಮದಿನದ ಸಮಾರಂಭಗಳನ್ನು ಹಮ್ಮಿಕೊಂಡು ಅನಾವಶ್ಯಕ ವೆಚ್ಚಮಾಡಬೇಡಿ. ನಿಮ್ಮ ಆಶೀರ್ವಾದವೇ ನನಗೆ ಜನ್ಮದಿನದ ಶುಭಾಶಯ ಎಂದಿದ್ದಾರೆ.