ಚುನಾವಣೆ ಹೊತ್ತಿನಲ್ಲಿ ಡಿಕೆಶಿಯಿಂದ ಬಿಜೆಪಿಗೆ 'ಬಿಗ್‌ ಶಾಕ್‌': ಲಕ್ಷ್ಮಣ ಸವದಿ 'ಕಾಂಗ್ರೆಸ್‌' ಸೇರಲು ನಿರ್ಧಾರ

ಚುನಾವಣೆ ಹೊತ್ತಿನಲ್ಲಿ ಡಿಕೆಶಿಯಿಂದ ಬಿಜೆಪಿಗೆ 'ಬಿಗ್‌ ಶಾಕ್‌': ಲಕ್ಷ್ಮಣ ಸವದಿ 'ಕಾಂಗ್ರೆಸ್‌' ಸೇರಲು ನಿರ್ಧಾರ

ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಹಲವು ಮಂದಿ ಹಲವು ಕಾರಣದಿಂದ ಎಲ್ಲರ ಗಮನ ಸೆಳೆಯುತ್ತಿದೆ. ಈ ನಡುವೆ ಬಿಜೆಪಿಯಲ್ಲಿ ಟಿಕೆಟ್‌ ಘೋಷಣೆಯಾದ ಬಳಿಕ ಹಲವು ಮಂದಿ ಬಂಡಾಳ ಏಳುತ್ತಿದ್ದಾರೆ. ಈ ನಡುವೆ ಬಿಜೆಪಿಗಿಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಗುಡ್‌ ಬೈ ಹೇಳಲಿದ್ದು, ಸಭಾಪತಿಗಳಿಗೆ ಇಂದು ಬೆಂಗಳೂರಿಗೆ ಆಗಮಿಸಿ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ.

ಈಗಾಗಲೇ ವಿಶೇಷ ವಿಮಾನದಲ್ಲಿ ಬೆಳಗಾವಿಯಿಂದ ಬೆಂಗಳೂರಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ಹಾಲಿ ಎಂಎಲ್‌ಸಿ ಚನ್ನರಾಜ್‌ ಜೊತೆಗೆ ಪ್ರಯಾಣ ಬೆಳಸಿದ್ದು, ವಿಮಾನವನ್ನು ಡಿ ಕೆ ಶಿವಕುಮಾರ್‌ ಹೆಸರಿನಲ್ಲಿ ಬುಕ್‌ ಮಾಡಲಾಗಿದೆ ಎನ್ನಲಾಗಿದೆ. ಇದಕ್ಕೂ ಮುನ್ನ ರಾಜು ಕಾಗೆ ಕೂಡ ಸವದಿ ಜೊತೆಗೆ ಮಾತನಾಡಿದ್ದರು, ಈ ಮೂಲಕ ಅವರನ್ನು ಕಾಂಗ್ರೆಸ್‌ಗೆ ತರಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎನ್ನುವ ಸಂದೇಶವನ್ನು ಅವರು ನೀಡಿದ್ದು. ಬೆಳಗಾವಿಯಲ್ಲಿರುವ ಮತಗಳನ್ನು ಕಾಂಗ್ರೆಸ್‌ ಕಡೆಗೆ ತಿರುಗಿಸುವ ನಿಟ್ಟಿನಲ್ಲಿ ಸವದಿಯನ್ನು ಪಾರ್ಟಿಗೆ ಕರೆತರಲಾಗುತ್ತಿದೆ ಎನ್ನಲಾಗಿದೆ.