ಗ್ರಾಹಕರಿಗೆ ಬಿಗ್ ಶಾಕ್ : ಕರ್ನಾಟಕದ ಈ ಬ್ಯಾಂಕ್ ಗೆ `RBI' ನಿರ್ಬಂಧ!

ಮಂಡ್ಯ : ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಮದ್ದೂರಿನ ಶಿಂಷಾ ಸಹಕಾರ ಬ್ಯಾಂಕ್ ನಿಯಮಿತದ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನಿರ್ಬಂಧ ಹೇರಿದೆ.
ಬ್ಯಾಂಕ್ನ ಹಣಕಾಸು ಸ್ಥಿತಿ ಹದಗೆಡುತ್ತಿರುವ ಕಾರಣ ಆರ್ಬಿಐ ಈ ತೀರ್ಮಾನ ಕೈಗೊಂಡಿದೆ.
ಬ್ಯಾಂಕ್ ನ ಅರ್ಹ ಠೇವಣಿದಾರರು ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮವು (ಡಿಐಸಿಜಿಸಿ) ನೀಡುವ ವಿಮಾ ಸೌಲಭ್ಯಕ್ಕೆ ಅರ್ಹರಾಗುತ್ತಾರೆ ಎಂದು ಆರ್.ಬಿ.ಐ ಹೇಳಿದೆ. ಅಂದರೆ, ಇಷ್ಟು ಪ್ರಮಾಣದ ಗ್ರಾಹಕರಿಗೆ 5 ಲಕ್ಷದವರೆಗಿನ ಠೇವಣಿಗೆ ವಿಮೆಯ ರಕ್ಷೆ ಇರಲಿದೆ.