ಗೋ ರಕ್ಷಣೆ ನೆಪದಲ್ಲಿ ದರೋಡೆಗೆ ಹೊಂಚು ಹಾಕಿ ಕೂತಿದ್ದರಾ? - ಹೆಚ್ ಡಿ ಕುಮಾರಸ್ವಾಮಿ ಪ್ರಶ್ನೆ
ಬೆಂಗಳೂರು: ರಾತ್ರಿ ಹೊತ್ತು ಇವರು ರಸ್ತೆಯಲ್ಲಿ ಕ್ರಿಕೆಟ್ ಬ್ಯಾಟುಗಳನ್ನಿಡಿದುಕೊಂಡು ಗಸ್ತು ತಿರುಗುತ್ತಿದ್ದರು ಎಂದರೆ, ಇವರಿಗೆ ಪೊಲೀಸರ ಮೌನ ಅನುಮತಿ ಇತ್ತಾ? ಇಲ್ಲವೇ, ಇವರೇನು ಮಫ್ತಿ ಪೊಲೀಸರಾ? ಅಥವಾ ಗೋ ರಕ್ಷಣೆ ನೆಪದಲ್ಲಿ ದರೋಡೆಗೆ ಹೊಂಚು ಹಾಕಿ ಕೂತಿದ್ದರಾ?
ನಿಜಕ್ಕಾದರೆ, ಗೋ ಸಂಕ್ಷಣೆಯ ಸೋಗಿನ ಈ ಸೋಗಲಾಡಿಗಳಿಗೆ ಆಶ್ರಯ, ಮೇವು ಇಲ್ಲದೆ ಬೀದಿಪಾಲಾಗಿರುವ ಅನಾಥ ಗೋವುಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಆದರೆ, ಜಾತಿ ಧರ್ಮಗಳ ನಡುವೆ ಬೆಂಕಿ ಇಟ್ಟು ಚಳಿ ಕಾಯಿಸಿಕೊಳ್ಳುವುದೇ ಇವರ ಜಾಯಮಾನ. ಪೊಲೀಸ್ ವ್ಯವಸ್ಥೆ ಗಾಢ ನಿದ್ದೆಯಲ್ಲಿದೆಯಾ? ಎಂದು ಕೇಳಿದ್ದಾರೆ.ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಈ ಘಟನೆ ನಡೆದಿದೆ. ರಾಜ್ಯದಲ್ಲಿ ಕೋಮು ಸೌಹಾರ್ದ ಕದಡಿ ಹಿಂಸಾಚಾರ ಸೃಷ್ಟಿಸುವುದು ಮತ್ತು ಚುನಾವಣೆ ಹೊತ್ತಿನಲ್ಲಿ ಕರ್ನಾಟಕವನ್ನು ಕದಡುವುದೇ ಇವರ ದುರುದ್ದೇಶ ಆಗಿರುವಂತಿದೆ. ನನಗೆ ಈ ಹತ್ಯೆ ಆಘಾತ ಉಂಟು ಮಾಡಿದೆ ಎಂದು ಖೇದ ವ್ಯಕ್ತ ಪಡಿಸಿದ್ದಾರೆ.