ಗದಗದಲ್ಲಿ ಶ್ವಾನದ ರುಚಿ ನೋಡಲು ಬಂದು ಬಲೆಗೆ ಬಿದ್ದ ಚಿರತೆ

ಗದಗದಲ್ಲಿ ಶ್ವಾನದ ರುಚಿ ನೋಡಲು ಬಂದು ಬಲೆಗೆ ಬಿದ್ದ ಚಿರತೆ

ದಗ : ಜಿಲ್ಲೆಯ ಜನರ ನಿದ್ದೆಗೆಡಿಸಿದ್ದ ಚಿರತೆಯೊಂದು ಬಲೆಗೆ ಬಿದ್ದ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಭೈರಾಪುರದಲ್ಲಿ ನಡೆದಿದೆ.

ಭೈರಾಪೂರ ಜನರ ಭಾರೀ ಆತಂಕ್ಕೆ ಕಾರಣವಾಗಿದ್ದ ಚಿರತೆ ಇಂದು ಸೆರೆಯಾಗಿದೆ.

ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಭಾರೀ ಕಾರ್ಯಾಚರಣೆ ನಡೆಸಿದ್ದರು. ಇಂದು ಚಿರತೆ ಅರಣ್ಯ ಇಲಾಖೆ ಬೋನಿಗೆ ಬಿದ್ದಿದೆ.. ಶ್ವಾನದ ರುಚಿ ನೋಡಲು ಬಂದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಮತ್ತೊಂದು ಚಿರತೆಗಾಗಿ ಶೋಧ ಕಾರ್ಯ ಮುಂದುವರೆಸಿದೆ.