ಕೊಪ್ಪಳದಲ್ಲಿ ಬಲವಂತದ ಮತಾಂತರ ಪ್ರಕರಣ; ಮೂವರ ವಿರುದ್ಧ ದೂರು ದಾಖಲು

ಕೊಪ್ಪಳದಲ್ಲಿ ಬಲವಂತದ ಮತಾಂತರ ಪ್ರಕರಣ; ಮೂವರ ವಿರುದ್ಧ ದೂರು ದಾಖಲು

ಕೊಪ್ಪಳ: ಜಿಲ್ಲೆಯಲ್ಲಿ ಬಲವಂತವಾಗಿ ಮತಾಂತರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚ್ ನ ಪಾಸ್ಟರ್‌ ಸೇರಿ ಮೂರು ಜನರ ವಿರುದ್ಧ ದೂರು ದಾಖಲಾಗಿದೆ.ಕೊಪ್ಪಳ ಜಿಲ್ಲೆಯ ಕಾರಟಗಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾರಟಗಿ ಪಟ್ಟಣದ ರಾಮನಗರದ ಚರ್ಚ್‌ ನ ಫಾಸ್ಟರ್‌ ಸತ್ಯನಾರಾಯಣ ಅಲಿಯಾಸ್ ಸ್ಯಾಮುವಲ್‌, ಶಿವಮ್ಮ ಅಲಿಯಾಸ್‌ ಸಾರಾ, ಚಿರಂಜೀವಿ ಡ್ಯಾನುವಲ್‌ ಎಂಬುವವರ ವಿರುದ್ಧ ದೂರು ದಾಖಲಾಗಿದೆ. ಈ ಮೂವರು ದೂರುದಾರ ಶಂಕರ್‌ ಕುಟುಂಬದವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ ತನಿಖೆ ಮುಂದುವರಿದಿದೆ.