ಕೇಂದ್ರ ಸಚಿವರ ಸಹೋದರನಿಗೇ ಸಿಗದ ಚಿಕಿತ್ಸೆ; ಐಸಿಯುನಲ್ಲಿ ವೈದ್ಯರಿಲ್ಲದೇ ಸಾವು...!

ಕೇಂದ್ರ ಸಚಿವರ ಸಹೋದರನಿಗೇ ಸಿಗದ ಚಿಕಿತ್ಸೆ; ಐಸಿಯುನಲ್ಲಿ ವೈದ್ಯರಿಲ್ಲದೇ ಸಾವು...!

ಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ಕೇಂದ್ರ ಸಚಿವ ಅಶ್ವಿನಿ ಚೌಬೆ ಅವರ ಸಹೋದರ ನಿರ್ಮಲ್ ಚೌಬೆ ಭಾಗಲ್ಪುರದ ಮಾಯಾಗಂಜ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ವೈದ್ಯಕೀಯ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಅನ್ನೋದು ಸಂಬಂಧಿಕರ ಆರೋಪ. ನಿರ್ಮಲ್‌ ಚೌಬೆ ತೀವ್ರ ಅಸ್ವಸ್ಥಗೊಂಡಿದ್ದು, ಕೂಡಲೇ ಅವರನ್ನು ಭಾಗಲ್ಪುರದ ಮಾಯಾಗಂಜ್‌ ಆಸ್ಪತ್ರೆಗೆ ಕರೆತರಲಾಯ್ತು.

ಆದರೆ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ವೈದ್ಯರೇ ಇರಲಿಲ್ಲ.

ನಿರ್ಮಲ್‌ ತೀವ್ರ ಹೃದಯಾಘಾತಕ್ಕೊಳಗಾಗಿ ಗಂಭೀರ ಸ್ಥಿತಿಯಲ್ಲಿದ್ದರು. ಆಸ್ಪತ್ರೆಯಲ್ಲಿದ್ದ ಹಿರಿಯ ವೈದ್ಯರು ಅವರಿಗೆ ತಕ್ಷಣಕ್ಕೆ ಚಿಕಿತ್ಸೆ ನೀಡಿದ್ದಾರೆ. ನಂತರ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಯಿತು. ಆದರೆ ಅಲ್ಲಿ ವೈದ್ಯರು ಇರಲಿಲ್ಲ. ಪರಿಣಾಮ ಸೂಕ್ತ ಚಿಕಿತ್ಸೆ ಸಿಗದೇ ಇದ್ದಿದ್ರಿಂದ ನಿರ್ಮಲ್‌ ಚೌಬೆ ಸಾವನ್ನಪ್ಪಿದ್ದಾರೆ. ಘಟನೆ ಬಳಿಕ ಆಸ್ಪತ್ರೆ ಅಧೀಕ್ಷಕರು ಇಬ್ಬರು ವೈದ್ಯರನ್ನು ಅಮಾನತು ಮಾಡಿದ್ದಾರೆ. ಮೃತರ ಸಂಬಂಧಿಕರು ಆಸ್ಪತ್ರೆಯ ನಿರ್ಲಕ್ಷದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ದೂರು ಬಂದರೆ ತನಿಖೆ ನಡೆಸುವುದಾಗಿ ಭಾಗಲ್ಪುರ ನಗರದ ಡಿಎಸ್‌ಪಿ ಅಜಯ್‌ ಕುಮಾರ್‌ ಚೌಧರಿ ತಿಳಿಸಿದ್ದಾರೆ.