ಕೆಎಸ್ಆರ್ಟಿಸಿಯಿಂದ ಗೋವಾ, ಕೇರಳಗೆ ಪ್ಯಾಕೇಜ್ ಟೂರ್

KSRTC ಮಂಗಳೂರು ವಿಭಾಗವು ಈ ತಿಂಗಳಲ್ಲಿ ಗೋವಾಕ್ಕೆ 2 ದಿನಗಳ ವಿಶೇಷ ಪ್ಯಾಕೇಜ್ ಪ್ರವಾಸ & ಕೇರಳಕ್ಕೆ ಒಂದು ದಿನದ ಪ್ರವಾಸದ ಕುರಿತು ಚಿಂತನೆ ನಡೆಸುತ್ತಿದೆ. ಮಂಗಳೂರು KSRTC ವಿಭಾಗೀಯ ನಿಯಂತ್ರಕ ರಾಜೇಶ್ ಶೆಟ್ಟಿ ಮಾತನಾಡಿ, ಕ್ರಿಸ್ಮಸ್ ರಜೆಯಲ್ಲಿ ಗೋವಾಕ್ಕೆ 2 ದಿನಗಳ ಟೂರ್ ಪ್ಯಾಕೇಜ್ನಲ್ಲಿ ಕೆಲಸ ಮಾಡುತ್ತಿದ್ದೇವೆ. ನಾವು ಆಹಾರ ಸೌಲಭ್ಯಗಳೊಂದಿಗೆ ಅಗ್ಗದ & ಉತ್ತಮ ವಸತಿಗಾಗಿ ಹುಡುಕುತ್ತಿದ್ದೇವೆ. ವಾಸ್ತವ್ಯವನ್ನು ಅಂತಿಮಗೊಳಿಸಿದ ನಂತರ ದಿನಾಂಕ ಪ್ರಕಟಿಸಲಾಗುವುದು ಎಂದಿದ್ದಾರೆ.