ಕೆಂಪೇಗೌಡರ ಪ್ರತಿಮೆಯ ಬಗ್ಗೆಯೂ ಇವರ ರಾಜಕೀಯ ನಿಂತಿಲ್ಲ: ಕಾಂಗ್ರೆಸ್ ನಾಯಕರ ವಿರುದ್ಧ ಕಟೀಲ್ ಕಿಡಿ

ಬೆಂಗಳೂರು: ಕಾಂಗ್ರೆಸ್‌ನವರಿಗೆ ಮೇಲುಕೋಟೆ ಅಯ್ಯಂಗಾರ್ ಹಾಗೂ ಕೊಡವರ ಮಾರಣಹೋಮ ನಡೆಸಿದ ಟಿಪ್ಪು ಮಾತ್ರ ಮನೆದೇವರಾ ಪ್ರಶ್ಮಿಸುವ ಮೂಲಕ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್‍ನ ಕೀಳುಮಟ್ಟದ ರಾಜಕಾರಣಕ್ಕೆ ಮತ್ತೊಂದು ಸಾಕ್ಷಿ ಎನ್ನುವ ಹಾಗೆ, ಕೆಂಪೇಗೌಡರ ಪ್ರತಿಮೆಯ ಬಗ್ಗೆಯೂ ಇವರ ರಾಜಕೀಯ ನಿಂತಿಲ್ಲ.
ಹಿಂದೂಗಳನ್ನು ಮತಾಂತರಗೊಳಿಸಿ, ಹೆಣ್ಣುಮಕ್ಕಳನ್ನು ಅತ್ಯಚಾರಗೊಳಿಸುತ್ತಿದ್ದವ ಇವರಿಗೆ ಮಾದರಿ ಎಂದಾದರೆ ಭೌದ್ಧಿಕ ದಾರಿದ್ರ್ಯಕ್ಕೆ ಏನೆನ್ನಬೇಕು? ಇನ್ನು ಸಿದ್ದರಾಮಯ್ಯ ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮ ಬರೀ ಗಿಮಿಕ್ ಎನ್ನುತ್ತಾರೆ. ಕಾಂಗ್ರೆಸ್‍ನ ಶಾಸಕ ತನ್ವಿರ್ ಸೇಠ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮೈಸೂರಿನಲ್ಲಿ 100 ಅಡಿ ಎತ್ತರದ ಟಿಪ್ಪು ಪ್ರತಿಮೆ ನಿರ್ಮಿಸುವುದಾಗಿ ಹೇಳುತ್ತಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಸರಣಿ ಟ್ವೀಟ್ ಮೂಲಕ ಕೆಂಡ ಕಾರಿದ್ದಾರೆ