ಕೃಷಿ ಮೇಳಕ್ಕೆ ಇಂದು ತೆರೆ, ಹರಿದುಬಂದ ಜನಸಾಗರ

ಬೆಂಗಳೂರು, ನ.6- ರಾಜಧಾನಿಯ ಜಿಕೆವಿಕೆ ಆವರಣದಲ್ಲಿ ನಡೆದ ಕೃಷಿ ಮೇಳಕ್ಕೆ ರೈತರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಸೇರಿ ಲಕ್ಷಾಂತರ ಜನರು ಭೇಟಿ ನೀಡಿ ಈ ಬಾರಿ ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ ನಡೆದ ಕೃಷಿ ಮೇಳದಲ್ಲಿ ದಿನವೊಂದಕ್ಕೆ 5 ಲಕ್ಷ ಜನರು ಭೇಟಿ ನೀಡಿದ್ದು ದಾಖಲೆಯ ವಿಷಯವಾಗಿತ್ತು.
ಆದರೆ, ಈ ಬಾರಿ ಆ ದಾಖಲೆಯನ್ನು ಮುರಿದಿದ್ದು, ನಿನ್ನೆ ಒಂದೇ ದಿನ 7.16 ಲಕ್ಷ ಜನರು ಬೇಟಿ ನೀಡಿ ನೀಡಿದ್ದಾರೆ. ಇಂದು ಕೊನೆಯ ದಿನವಾಗಿದ್ದು, ಜೋತೆಗೆ ಭಾನುವಾರವಾಗಿದ್ದು ಮಧ್ಯಾಹ್ನದವರೆಗೆ 2 ಲಕ್ಷ ಜನ ಆಗಮಿಸಿದ್ದು, ಸಂಜೆ ವೇಳೆಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವ ನಿರೀಕ್ಷೆ ಇದೆ.
ಭಾರೀ ವಹಿವಾಟು: ಬೆಳೆಗಳ ಪ್ರಾತ್ಯಕ್ಷತೆ ಸೇರಿ 800 ಕೃಷಿಗೆ ಸಂಬಂಧಿಸಿದ ಮಳಿಗೆಗಳಿಂದ ನಿನ್ನೆ ಒಂದೇ ದಿನ 2.85 ಕೋಟಿ ರೂ. ವಹಿವಾಟು ನಡೆದಿದೆ. ಈ ಬಾರಿ ಕೃಷಿಮೇಳದಲ್ಲಿ ನವೋದ್ಯಮಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು, ಕೃಷಿಯಾಧಾರಿತ ಉದ್ಯಮಗಳ ರೈತರಿಗೆ ಅನುಕೂಲ ವಾಗುವಂತಹ ನೂತನ ತಂತ್ರಜ್ಞಾನದೊಂದಿಗೆ ರೈತರ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಯಂತ್ರಗಳನ್ನು ಆವಿಷ್ಕರಿಸಿ ಪ್ರದರ್ಶನಕ್ಕಿಟ್ಟು ಅನ್ನದಾತರಿಗೆ ಮಾಹಿತಿ ನೀಡಲಾಯಿತು.
ಪ್ರತಿನಿತ್ಯ ಬಳಸುವ ಮಸಾಲೆ, ಹಣ್ಣು, ತರಕಾರಿ, ಗಿಡ, ಬಳ್ಳಿಗಳಿಗೆ ಭಾರೀ ಬೇಡಿಕೆ ಇದ್ದು, ಮೇಳದ ನರ್ಸರಿಗಳಲ್ಲಿ ಇವುಗಳ ಮಾರಾಟ ಮತ್ತು ಪ್ರದರ್ಶನ ಜೋರಾಗಿತ್ತು.
ವಿದ್ಯಾರ್ಥಿಗಳ ಕಲರವ: ಈ ಬಾರಿ ವಿದ್ಯಾರ್ಥಿಗಳು ಸಹ ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕೃಷಿ ಯಂತ್ರಗಳ ಹಾಗೂ ಬೇಳೆ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಿದರು. ನಗರದ ವಿದ್ಯಾರ್ಥಿಗಳಲ್ಲದೆ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಆಗಮಿಸಿದ್ದು ವಿಶೇಷವಾಗಿತ್ತು.
ಆದರೆ, ಈ ಬೈಕ್‍ಅನ್ನು ರಸ್ತೆಯಲ್ಲಿ ಓಡಿಸಲು ಅನುಮತಿ ಇಲ್ಲ. ಮನೆಯ ಅಂಗಳ, ಖಾಲಿ ಜಮೀನುಗಳಲ್ಲಿ ಮಾತ್ರ ಮಕ್ಕಳು ಓಡಿಸಹಬುದಾಗಿದೆ ಎಂದು ಸುಕುಮಾರ್ ತಿಳಿಸಿದ್ದು, ಸದ್ಯಕ್ಕೆ ಎರಡು ಬೈಕ್‍ಗಳನ್ನು ಮಾತ್ರ ಸಿದ್ಧಪಡಿಸಲಾಗಿದ್ದು, ಬೇಕಾದವರು ಆರ್ಡರ್ ಕೊಟ್ಟರೆ ತಯಾರಿಸಿ ಕೊಡಲಾಗುವುದೆಂದು ತಿಳಿಸಿದ್ದಾರೆ.
ಕುರಿ, ಕೊಳಿ, ಮೇಕೆಗಳು ಪ್ರಮುಖ ಆಕರ್ಷಣೀಯ ವಾಗಿದ್ದು, ರೈತರು ವೀಕ್ಷಿಸಿ ಮಾಹಿತಿ ಪಡೆದುಕೊಂಡರು.
ಒಟ್ಟಾರೆ, ಈ ಬಾರಿ ಕೃಷಿ ಮೇಳದಲ್ಲಿ ಹಲವಾರು ನವೋದ್ಯಮ ಕಂಪೆನಿಗಳು ರೈತರಿಗೆ ಉಪಯುಕ್ತವಾದ ಯಂತ್ರಗಳು ಹಾಗೂ ಕೃಷಿ ವಿವಿ ಸಂಶೋಸಿ ಆವಿಷ್ಕರಿಸಿದ ನೂತನ ತಳಿಗಳು ರೈತರಿಗೆ ವರದಾನವಾಗಿದ್ದು, ಪ್ರತಿ ವರ್ಷ ಮೇಳದಲ್ಲಿ ಹೊಸ ಹೋಸ ತಂತ್ರಜ್ಞಾನ ಮಾಹಿತಿಗಳನ್ನು ಜಿಕೆವಿಕೆ ನೀಡುತ್ತಾ ಬಂದಿದೆ.
ಆದರೆ, ಈ ಬೈಕ್‍ಅನ್ನು ರಸ್ತೆಯಲ್ಲಿ ಓಡಿಸಲು ಅನುಮತಿ ಇಲ್ಲ. ಮನೆಯ ಅಂಗಳ, ಖಾಲಿ ಜಮೀನುಗಳಲ್ಲಿ ಮಾತ್ರ ಮಕ್ಕಳು ಓಡಿಸಹಬುದಾಗಿದೆ ಎಂದು ಸುಕುಮಾರ್ ತಿಳಿಸಿದ್ದು, ಸದ್ಯಕ್ಕೆ ಎರಡು ಬೈಕ್‍ಗಳನ್ನು ಮಾತ್ರ ಸಿದ್ಧಪಡಿಸಲಾಗಿದ್ದು, ಬೇಕಾದವರು ಆರ್ಡರ್ ಕೊಟ್ಟರೆ ತಯಾರಿಸಿ ಕೊಡಲಾಗುವುದೆಂದು ತಿಳಿಸಿದ್ದಾರೆ.
ಕುರಿ, ಕೊಳಿ, ಮೇಕೆಗಳು ಪ್ರಮುಖ ಆಕರ್ಷಣೀಯ ವಾಗಿದ್ದು, ರೈತರು ವೀಕ್ಷಿಸಿ ಮಾಹಿತಿ ಪಡೆದುಕೊಂಡರು.
ಒಟ್ಟಾರೆ, ಈ ಬಾರಿ ಕೃಷಿ ಮೇಳದಲ್ಲಿ ಹಲವಾರು ನವೋದ್ಯಮ ಕಂಪೆನಿಗಳು ರೈತರಿಗೆ ಉಪಯುಕ್ತವಾದ ಯಂತ್ರಗಳು ಹಾಗೂ ಕೃಷಿ ವಿವಿ ಸಂಶೋಸಿ ಆವಿಷ್ಕರಿಸಿದ ನೂತನ ತಳಿಗಳು ರೈತರಿಗೆ ವರದಾನವಾಗಿದ್ದು, ಪ್ರತಿ ವರ್ಷ ಮೇಳದಲ್ಲಿ ಹೊಸ ಹೋಸ ತಂತ್ರಜ್ಞಾನ ಮಾಹಿತಿಗಳನ್ನು ಜಿಕೆವಿಕೆ ನೀಡುತ್ತಾ ಬಂದಿದೆ. ಮೋಡ ಕವಿದ ವಾತಾವರಣ, ತುಂತುರು ಮಳೆ ನಡುವೆಯೂ ಈ ಬಾರಿ ಕೃಷಿ ಮೇಳ ಯಶಸ್ವಿಯಾಗಿ ನಡೆದಿದ್ದು, ಇಂದು ಮೇಳಕ್ಕೆ ತೆರೆ ಬಿದ್ದಿದೆ.