ಕಾರಿನಿಂದ ಇಳಿದು BJP ಕಾರ್ಯಕರ್ತರತ್ತ ಕೈ ಬೀಸಿದ ಪ್ರಧಾನಿ; ಮುಗಿಲು ಮುಟ್ಟಿದ ಕೇಸರಿ ಸಂಭ್ರಮ; ಎಲ್ಲೆಲ್ಲೂ ಮೋದಿ ಮೋದಿ ಜಯಘೋಷ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇಂದು ಕೇಸರಿ ಕಾರ್ಯಕರ್ತರಲ್ಲಿ ಎಲ್ಲಿಲ್ಲದ ಉತ್ಸಾಹ, ನವ ಹುಮ್ಮಸ್ಸು. ಕಾರಣ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದ್ದು, ಬಿಜೆಪಿ ಕಾರ್ಯಕರ್ತರಲ್ಲಿ ಸಡಗರ, ಸಂಭ್ರಮ ಮನೆ ಮಾಡಿದೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲು ಹಾಗೂ ಭಾರತ್ ಗೌರವ್ ಕಾಶಿ ರೈಲುಗಳಿಗೆ ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿ ಬಳಿಕ ಹೆಬ್ಬಾಳದ ಹೆಲಿಪ್ಯಾಡ್ ನತ್ತ ಹೊರಟಿದ್ದರು.
ಕಾರ್ಯಕರ್ತರ ಉತ್ಸಾಹ ಕಂಡ ಪ್ರಧಾನಿ ಮೋದಿಯವರು ಕಾರಿನಿಂದ ಇಳಿದು ಕಾರ್ಯಕರ್ತರತ್ತ ಕೈ ಬೀಸಿದರು. ಬಳಿಕ ನಗುತ್ತ ಜನರತ್ತ ಸಾಗಿ ಕಾರ್ಯಕರ್ತರ ಸಂಭ್ರಮಕ್ಕೆ ಇನ್ನಷ್ಟು ಹುಮ್ಮಸ್ಸು ನೀಡಿದರು. ಕಾರ್ಯಕರ್ತರ ಸಂತೋಷಕ್ಕೆ ಪಾರವೇ ಇಲ್ಲ ಎಂಬಷ್ಟರ ಮಟ್ಟಿಗೆ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಜಯಕಾರ ಕೂಗಿದರು.
ಬಳಿಕ ಕಾರಿನಲ್ಲಿ ಹೆಬ್ಬಾಳದ ಹೆಲಿ ಪ್ಯಾಡ್ ನತ್ತ ಪ್ರಧಾನಿ ಮೋದಿ ತೆರಳಿದರು. ಕೆಂಪೆಗೌಡ ಏರ್ ಪೋರ್ಟ್ ನಲ್ಲಿ ಟರ್ಮಿನಲ್ 2 ಉದ್ಘಾಟನೆ ಮಾಡಲಿ