"ಐಟಿ ವಲಯದಲ್ಲಿ ಶೀಘ್ರ 2 ಲಕ್ಷ ಉದ್ಯೋಗಗಳು ಸೃಷ್ಟಿ"

ಐಟಿ ವಲಯದಲ್ಲಿ ಶೀಘ್ರದಲ್ಲೇ 2 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಹೇಳಿದ್ದಾರೆ. ಬೆಂಗಳೂರು ಟೆಕ್ ಸಮ್ಮಿಟ್‍ನಲ್ಲಿ ಮಾತನಾಡಿದ ಅವರು, ಮುಂದಿನ ಹಲವು ವರ್ಷಗಳ ಕಾಲ ಐಟಿ ಉದ್ಯಮದಲ್ಲಿ ಹೂಡಿಕೆಯಾಗಲಿದ್ದು, ಶೀಘ್ರವೇ 2 ಲಕ್ಷ ಜನರ ನೇಮಕಾತಿ ನಡೆಯಬಹುದು. ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಐಟಿ ಸೇವಾ ಕ್ಷೇತ್ರ ವಿಶ್ವಾಸ ಹೆಚ್ಚಿಸಿಕೊಂಡಿದೆ. ಇದು ಉದ್ಯೋಗಗಳ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ಹೇಳಿದರು.