ಚೀನಾದಲ್ಲಿ ಕೊರೊನಾ ಹೆಚ್ಚಳದಿಂದ ಕರ್ನಾಟಕದಲ್ಲಿ ʼಅಲರ್ಟ್‌ʼ; ಈ ಬಾರಿ ಹೊಸ ವರ್ಷಾಚರಣೆಗೆ ಬೀಳುತ್ತಾ? ಬ್ರೇಕ್‌

ಚೀನಾದಲ್ಲಿ ಕೊರೊನಾ ಹೆಚ್ಚಳದಿಂದ ಕರ್ನಾಟಕದಲ್ಲಿ ʼಅಲರ್ಟ್‌ʼ; ಈ ಬಾರಿ ಹೊಸ ವರ್ಷಾಚರಣೆಗೆ ಬೀಳುತ್ತಾ? ಬ್ರೇಕ್‌

ಬೆಂಗಳೂರು: ಚೀನಾ ಸೇರಿದಂತೆ ಬೇರೆ ಕಡೆಯಿಂದ ಕೊರೊನಾ ವೈರಸ್‌ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಮುಂದಾಗಿದೆ.

ಆದರೆ ಈ ಬಾರಿ ನ್ಯೂ ಇಯರ್‌ ಸೆಲೆಬ್ರೇಷನ್‌ ಮಾಡಲು ಆಯೋಜಕರಿಗೆ ಕೊಟ್ಟಿದ್ದಾರೆ. ಆದರೆ ಈ ಕೊರೊನಾದಿಂದ ನ್ಯೂ ಇಯರ್‌ ಸೆಲೆಬ್ರೇಷನ್‌ ಬ್ರೇಕ್‌ ಬೀಳುತ್ತಾ ಎಂಬ ಅನುಮಾನ ಕಾಡತೊಡಗಿದೆ. ಹೀಗಾಗಿ ಅದ್ಧೂರಿಯಾಗಿ ಹೊಸ ವರ್ಷ ಬರ ಮಾಡಿಕೊಳ್ಳುವ ಬೆಂಗಳೂರಿಗೆ ಜನರಿಗೆ ನಿರಾಸೆ ಆಗುವ ಸಾಧ್ಯತೆ ಇದೆ.ಕೋವಿಡ್‌ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಡಿ. 31 ರ ರಾತ್ರಿಯ ಪಾರ್ಟಿಗಳಿಗೆ ಷರತ್ತುಬದ್ಧ ಅವಕಾಶ ನೀಡುವ ಸಾಧ್ಯತೆ ಇದೆ. ಮುಂದಿನ ಮೂರು ತಿಂಗಳು ಕೊರೊನಾ ಕೇಸ್‌ ಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಈಗಾಗಲೇ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಮೂನ್ಸೂಚನೆ ನೀಡಿದೆ.