ಇದು ರೀಲ್ ಅಲ್ಲ ರಿಯಲ್: 'ಕಾಂತಾರ ಸಿನಿಮಾ'ದಂತೆ ದೈವ ಉತ್ಸವಕ್ಕೆ ತಡೆ ತಂದ ಮರುದಿನವೇ ವ್ಯಕ್ತಿ ಸಾವು

ಇದು ರೀಲ್ ಅಲ್ಲ ರಿಯಲ್: 'ಕಾಂತಾರ ಸಿನಿಮಾ'ದಂತೆ ದೈವ ಉತ್ಸವಕ್ಕೆ ತಡೆ ತಂದ ಮರುದಿನವೇ ವ್ಯಕ್ತಿ ಸಾವು

ಡುಪಿ: ಇಂದಿಗೆ ಕಾಂತಾರ ಸಿನಿಮಾ 100ನೇ ದಿನಕ್ಕೆ ಕಾಲಿಟ್ಟು, ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಇಂತಹ ಕಾಂತಾರ ಚಿತ್ರದಲ್ಲಿ ತನ್ನ ಜಮೀನನ್ನು ನಾನು ನ್ಯಾಯಾಲಯಕ್ಕೆ ಹೋಗಿ ಪಡೆಯುತ್ತೇನೆ ಎಂದಾಗ, ನೀನು ನ್ಯಾಯಾಲಯಕ್ಕೆ ಹೋಗುತ್ತೀಯಾ?

ನ್ಯಾಯವನ್ನು ನಾನು ಇಲ್ಲಿಯೇ ಮಾಡುತ್ತೇನೆ ಎಂಬುದಾಗಿ ಹೇಳುವ ಡೈಲಾಗ್ ಇದೆ. ಅದೇ ಮಾದರಿಯಲ್ಲಿಯೇ ದೈವ ಉತ್ಸವಕ್ಕೆ ತಡೆ ತಂದ ಮರುದಿನವೇ ವ್ಯಕ್ತಿಯೊಬ್ಬ ಉಡುಪಿಯ ಪಡುಬಿದ್ರಿಯಲ್ಲಿ ಸಾವನ್ನಪ್ಪಿರೋ ಘಟನೆ ನಡೆದಿದೆ.

ಹೌದು ದೇವಸ್ಥಾನದ ನೇಮೋತ್ಸವಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಂತ ವ್ಯಕ್ತಿಯೊಬ್ಬ ದೇವಸ್ಥಾನದ ಮುಂದೆಯೇ ಕುಸಿದು ಬಿದ್ದು ಮೃತಪಟ್ಟಿರೋ ಘಟನೆ, ಉಡುಪಿ ಜಿಲ್ಲೆಯ ಪಡುಹಿತ್ಲು ಜಾರಂದಾಯ ದೇವಸ್ಥಾನದಲ್ಲಿ ನಡೆದಿದೆ.

ದೇವಸ್ಥಾನದ ಮುಂದೆ ಕುಸಿದು ಬಿದ್ದು ಮೃತಪಟ್ಟ ವ್ಯಕ್ತಿಯನ್ನು ಜಾರಂದಾಯ ಗ್ರಾಮದ ಜಯ ಪೂಜಾರಿ ಎನ್ನಲಾಗಿದೆ. ಈತ ಸುಮಾರು 500 ವರ್ಷಗಳ ಐತಿಹ್ಯವಿರುವ ಪಡುಹಿತ್ಲು ಜಾರಂದಾಯ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ ನಡೆಯುವ ನೇಮಕ್ಕೆ ಡಿಸೆಂಬರ್ 23ರಂದು ತಡೆಯಾಜ್ಞೆ ತಂದಿದ್ದರು. ಈ ಬಳಿಕ ಡಿ.24ರಂದು ದೇವಸ್ಥಾನದ ಮುಂದೆಯೇ ಕುಸಿದು ಬಿದ್ದು ಮೃತಪಟ್ಟಿರೋದಾಗಿ ತಿಳಿದು ಬಂದಿದೆ.

ಅಂದಹಾಗೇ ಈ ಘಟನೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಾಂತಾರ ಸಿನಿಮಾದಲ್ಲಿ ದೈವದ ಮಾತಿಗೆ ಎದುರಾಡಿ ನ್ಯಾಯಾಲಯದ ಮೆಟ್ಟಿಲು ಏರಿದಂತ ವ್ಯಕ್ತಿಯ ಮೇಲೆ ಮುನಿಯುವ ದೈವ, ಆತ ದೇವಸ್ಥಾನದ ಮುಂದಿನ ಮೆಟ್ಟಿಲಿನ ಮೇಲೆ ರಕ್ತಕಾರಿ ಸಾಯುವಂತೆ ಮಾಡಿದಂತೆ ಇಲ್ಲಿಯೂ ಮಾಡಲಾಗಿದೆ ಎಂಬ ಚರ್ಚೆ ನಡೆಯುತ್ತಿದೆ.