ಇಂದು ಬೆಳಗಾವಿಗೆ ಪ್ರಧಾನಿ ಮೋದಿ ಆಗಮನ; ನಗರದ ಎಲ್ಲೆಡೆ ಬಿಜೆಪಿ ಬಾವುಟ ಹಾರಾಟ

ಬೆಳಗಾವಿ: ಇಂದು ಬೆಳಗಾವಿಗೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಎಲ್ಲೆಡೆ ಕೇಸರಿಮಯವಾಗಿದೆ. ಮೂಲೆ ಮೂಲೆಗಳಲ್ಲಿ ಬಿಜೆಪಿ ಬಾವುಟ ಹಾರಾಡುತ್ತಿವೆ.
ಬೆಳಗ್ಗೆ ಶಿವಮೊಗ್ಗ ಏರ್ ಪೋರ್ಟ್ ಉದ್ಘಾಟಿಸಿ ನಂತರ ಮಧ್ಯಾಹ್ನ ಹೊತ್ತಿಗೆ ಬೆಳಗಾವಿಗೆ ಮೋದಿ ಆಗಮಿಸಿದ್ದಾರೆ.
ಮೋದಿ ಆಗಮನ ಹಿನ್ನೆಲೆ ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ನಗರದ ಎಪಿಎಂಸಿ ಬಳಿಯ ಪೊಲೀಸ್ ಮೈದಾನದಿಂದ ಮಾಲಿನಿ ಸಿಟಿ ಮೈದಾನದವರೆಗೆ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಆಯೋಜನೆ ಹಿನ್ನಲೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವನ್ನು ಪೊಲೀಸ್ ಇಲಾಖೆ ಕೈಗೊಂಡಿದ್ದಾರೆ.