ಇಂದು ಪೆಟ್ರೋಲ್, ಡೀಸೆಲ್ ದರಗಳಲ್ಲಿ ಭಾರೀ ವ್ಯತ್ಯಾಸ : ಇಲ್ಲಿದೆ ಮಾಹಿತಿ

ನವದೆಹಲಿ : ಭಾರತದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗುತ್ತಿದ್ದು, ಇಂದೂ ಕೂಡ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ವ್ಯತ್ಯಾಸವಾಗಿದ್ದು, ವಾಹನಸವಾರರಿಗೆ ಬರೆ ಬೀಳುವುದಂತೂ ಗ್ಯಾರಂಟಿ ಎಂದರೆ ತಪ್ಪಗಲಾರದು.
ದಿನನಿತ್ಯ ಕಚ್ಚಾ ತೈಲ ದರ ಶರ ವೇಗದಲ್ಲಿ ಏರಿಕೆ ಗಮನಿಸಿದರೆ ಮತ್ತೆ ದೇಶದ ಎಲ್ಲ ಕಡೆ ಇಂಧನ ದರ ಮತ್ತಷ್ಟು ದುಬಾರಿಯಾಗುತ್ತಾ ಅನ್ನುವ ಆತಂಕವೂ ಕಾಡುತ್ತಿದೆ. ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ವ್ಯತ್ಯಾಸಗಳಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ
ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 96.72. ರೂ. ಇದೆ.ಮುಂಬೈನಲ್ಲಿ 106.31 , ಕೋಲ್ಕತ್ತಾದಲ್ಲಿ 106.03 ಚೆನ್ನೈನಲ್ಲಿ 102.63 ರೂಪಾಯಿ ಇದೆ. ಹಾಗೆಯೇ ಡಿಸೇಲ್ ದರದಲ್ಲಿಯೂ ಯಾವುದೇ ಬದಲಾವಣೆ ಆಗಿಲ್ಲ.
ದೆಹಲಿಯಲ್ಲಿ 89.62, ಮುಂಬೈನಲ್ಲಿ 94.27, ಕೋಲ್ಕತ್ತಾ 92.76, ಚೆನ್ನೈನಲ್ಲಿ 94.24 ರೂಪಾಯಿ ಇದೆ. ಪೆಟ್ರೋಲ್ ಹಾಗೂ ಡಿಸೇಲ್ ದರಗಳು ಪ್ರತಿ ತಿಂಗಳ 1 ರಿಂದ 16ರ ನಡುವೆ ಬದಲಾಗುತ್ತಿತ್ತು. ಆದಾಗ್ಯೂ ಜೂನ್ 2017ರ ನಂತರ ಜಾರಿಗೆ ಬಂದ ಹೊಸ ಯೋಜನೆಯಂತೆ ಪ್ರತಿದಿನ ಬೆಳಗ್ಗೆ ಆರು ಗಂಟೆಗೆ ಪೆಟ್ರೋಲ್ ಡಿಸೇಲ್ ದರಗಳಲ್ಲಿ ಬದಲಾವಣೆಯಾಗುತ್ತದೆ.
ಕರ್ನಾಟಕದ ಈ ಭಾಗದಲ್ಲಿ ಪೆಟ್ರೋಲ್ ದರಗಳನ್ನು ನೋಡುವುದಾದರೆ, ಬೆಂಗಳೂರು - ರೂ. 101.94, ಬೆಂಗಳೂರು ಗ್ರಾಮಾಂತರ - ರೂ 102.09,ದಕ್ಷಿಣ ಕನ್ನಡ - ರೂ. 101.21,ಕೊಡಗು - ರೂ. 103.26, ಮಂಡ್ಯ - ರೂ. 101.94, ಮೈಸೂರು - ರೂ. 101.50 , ಉಡುಪಿ - ರೂ. 101.83, ಉತ್ತರ ಕನ್ನಡ - ರೂ. 104.30 ಡಿಸೇಲ್ ದರ ಬೆಲೆಗಳ ಬೆಂಗಳೂರು - 87.89 , ಬೆಂಗಳೂರು ಗ್ರಾಮಾಂತರ - 88.03, ದಕ್ಷಿಣ ಕನ್ನಡ - 87.20,ಮೈಸೂರು -87.49,ಉಡುಪಿ -87.76,ಶಿವಮೊಗ್ಗ - 89.40 ಇಷ್ಟಿವೆ ಎಂದು ವರದಿಯಾಗಿದೆ.