ಆಟೋ ಚಾಲಕರೇ ಎಚ್ಚರ : ಆಟೋ ಮೇಲೆ ರಾಜಕೀಯ ಪಕ್ಷಗಳ ಫೋಟೋ ಹಾಕಿದ್ರೆ ಕೇಸ್!
ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿದ್ದು, ಆಟೋಗಳ ಮೇಲಿನ ರಾಜಕೀಯ ಸ್ಟಿಕ್ಕರ್, ಬ್ಯಾನರ್ ಗಳನ್ನು ನಿಷೇಧ ಮಾಡಲಾಗಿದೆ.
ಈ ಕುರಿತು ಮಾತನಾಡಿರುವ ಸಾರಿಗೆ ಇಲಾಖೆಯ ಜಂಟಿ ಆಯುಕ್ತ ಹಾಲಸ್ವಾಮಿ, ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಆಟೋಗಳ ಮೇಲೆ ರಾಜಕೀಯ ಪ್ರಚಾರ ಮಾಡಬಾರದು.
ಬೆಂಗಳೂರಿನಲ್ಲಿ ಸಾರಿಗೆ ಅಧಿಕಾರಿಗಳು ರಾಜಕೀಯ ನಾಯಕರ ಭಾವಚಿತ್ರ ಹಾಗೂ ಪಕ್ಷಗಳ ಚಿಹ್ನೆ ಹೊಂದಿರುವ ಆಟೋಗಳ ಮೇಲೆ ದಾಳಿ ನಡೆಸಿ ಬ್ಯಾನರ್, ಸ್ಟಿಕ್ಕರ್ ಗಳನ್ನು ತೆರವುಗೊಳಿಸಿ ಪ್ರಕರಣ ದಾಖಲಿಸುವ ಕಾರ್ಯಾಚರಣೆ ಮಾಡಿದ್ದು, ಈವರೆಗೆ ಬೆಂಗಳೂರು ನಗರದಲ್ಲಿರುವ 11 ಆರ್ ಟಿಒ ವಲಯಗಳಲ್ಲಿ 450 ಕ್ಕೂ ಹೆಚ್ಚು ಪ್ರಕರಣಗಳನ್ನು ಸಾರಿಗೆ ಅಧಿಕಾರಿಗಳು ದಾಖಲಿಸಿದ್ದಾರೆ.