ಆಂತರಿಕ ಕಲಹದಿಂದ ಬೇಸತ್ತು ಬ್ಲೇಡ್ ನಿಂದ ಕುತ್ತಿಗೆಗೆ ಇರಿದುಕೊಂಡ ಯುವಕ

ಆಂತರಿಕ ಕಲಹದಿಂದ ಬೇಸತ್ತು ಬ್ಲೇಡ್ ನಿಂದ ಕುತ್ತಿಗೆಗೆ ಇರಿದುಕೊಂಡ ಯುವಕ

ಮನೆಯಲ್ಲಿನ ಆಂತರಿಕ ಕಲಹದಿಂದ ಮನನೊಂದು, ಯುವಕನೊಬ್ಬ ಬ್ಲೇಡ್ ನಿಂದ ಕುತ್ತಿಗೆಗೆ ಇರಿದುಕೊಂಡು ಗಂಭೀರವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ಭೈರಿದೇವರಕೊಪ್ಪದ ಕಿಶೋರ್ ಮೂಗನೂರು ಎಂಬ ಯುವಕ, ಕ್ಷುಲ್ಲಕ ವಿಚಾರಕ್ಕೆ  ಮನೆಯಲ್ಲಿ ಜಗಳ ತೆಗೆದು, ಅದೇ ಸಿಟ್ಟಿನಲ್ಲಿ ತನ್ನ ಕುತ್ತಿಗೆಗೆ ತಾನೇ ಬ್ಲೇಡ್ ನಿಂದ ಕುಯ್ದುಕೊಂಡು
ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಸ್ವಸ್ಥನಾಗಿದ್ದ ಕಿಶೋರ್ ನನ್ನು ಕೂಡಲೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಸ್ಥಳಕ್ಕೆ ಉತ್ತರ ವಿಭಾಗದ ಎಸಿಪಿ ವಿನೋದ್ ಮುಕ್ತೇದಾರ್
ಭೇಟಿ ನೀಡಿ ಘಟನೆಯ ಕುರಿತು ಮಾಹಿತಿ ಪಡೆದಿದ್ದು, ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.