ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ಪ್ರಬಲ ಭೂಕಂಪ, ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆ ದಾಖಲು
ನವದೆಹಲಿ: ಭಾರತದಲ್ಲಿ ಮತ್ತೊಮ್ಮೆ ಭೂಮಿ ಕಂಪಿಸಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಪೋರ್ಟ್ ಬ್ಲೇರ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಶನಿವಾರ ರಾತ್ರಿ ಪ್ರಬಲ ಭೂಕಂಪ ಸಂಭವಿಸಿದೆ. ಈ ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 4.0 ಎಂದು ಅಳೆಯಲಾಗಿದೆ.
ಮಹಾಬಲೇಶ್ವರ ಶೆಟ್ಟಿ ನೇತೃತ್ವದಲ್ಲಿ ಗೋಪಾಲಕೃಷ್ಣ ಬೇಳೂರು ಸಮ್ಮುಖದಲ್ಲಿ ಸುಮಾರು 50ಕ್ಕೂ ಹೆಚ್ಚು ಯುವಕರು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆ
ಸಾಗರ: ಕಾಂಗ್ರೇಸ್ ಪಕ್ಷದಿಂದ ಸ್ಪರ್ಧಿಸಲಿರುವ ಗೋಪಾಲಕೃಷ್ಣ ಬೇಳೂರುರವರನ್ನು ಮುಂದಿನ ಚುನಾವಣೆಯಲ್ಲಿ ಬೆಂಬಲಿಸುವ ಉದ್ದೇಶದಿಂದ ಮಹಾಬಲೇಶ್ವರ ಶೆಟ್ಟಿ ನೇತೃತ್ವದಲ್ಲಿ ಗೋಪಾಲಕೃಷ್ಣ ಬೇಳೂರು ಸಮ್ಮುಖದಲ್ಲಿ ಸುಮಾರು 50ಕ್ಕೂ ಹೆಚ್ಚು ಯುವಕರು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮಂಡಗಳಲೆ ಗಣಪತಿ, ಯಶವಂತ ಫಣಿ, ಅಶೋಕ ಬೇಳೂರು, ಸಿಎಂ ಚಿನ್ಮಯ್,ರಮೇಶ ದಿಗಟೇಕೊಪ್ಪ, ಮನೋಜ್ ಕುಗ್ವೆ, ಶ್ರೀಧರ್ ಪಟೇಲ್, ಸಂತು ಮಿಡಿಯಾ ಹಾಜರಿದ್ದರು.
ಕೆನಡಾದಿಂದ ಅಮೆರಿಕ ಪ್ರವೇಶಿಸಲು ಯತ್ನಿಸುತ್ತಿದ್ದ 5 ಮಂದಿ ಭಾರತೀಯರು ಸೇರಿ 8 ಮಂದಿ ಸಾವು
ನ್ಯೂಯಾರ್ಕ್: ಕೆನಡಾ-ಅಮೆರಿಕ ಗಡಿ ಬಳಿಯ ಸೇಂಟ್ ಲಾರೆನ್ಸ್ ನದಿಯ ದಡದಲ್ಲಿ ಅಕ್ರಮವಾಗಿ ಅಮೆರಿಕ ಪ್ರವೇಶಿಸಲು ಯತ್ನಿಸಿದ ಇಬ್ಬರು ಮಕ್ಕಳು ಸೇರಿದಂತೆ 8 ಮಂದಿ ಶವವಾಗಿ ಪತ್ತೆಯಾಗಿದ್ದಾರೆ. ಇದರಲ್ಲಿ ಐವರು ಭಾರತೀಯರು ಸೇರಿದ್ದಾರೆ ಎನ್ನಲಾಗಿದೆ. ಮುಳುಗಿದ ದೋಣಿಯ ಬಳಿ ಅವರ ಮೃತದೇಹಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ದೇಹಗಳು ಎರಡು ಕುಟುಂಬಗಳದ್ದು ಎಂದು ಹೇಳಲಾಗುತ್ತಿದೆ. ಇದರಲ್ಲಿ ಒಂದು ಕುಟುಂಬ ಭಾರತೀಯರಾಗಿದ್ದರೆ, ಇನ್ನೊಂದು ಕುಟುಂಬ ರೊಮೇನಿಯಾ ಮೂಲದವರಾಗಿದ್ದು, ಇವರಿಂದ ಕೆನಡಾದ ಪಾಸ್‌ಪೋರ್ಟ್ ವಶಪಡಿಸಿಕೊಳ್ಳಲಾಗಿದೆ. ಮತ್ತೊಂದೆಡೆ, ಕೆನಡಾ ಪೊಲೀಸರು ಈ ಪ್ರಕರಣದಲ್ಲಿ ತನಿಖೆ ಆರಂಭಿಸಿದ್ದಾರೆ.
'ಒಟ್ಟು ಎಂಟು ಮೃತದೇಹಗಳನ್ನು ಈಗ ನೀರಿನಿಂದ ಹೊರತೆಗೆಯಲಾಗಿದೆ. ಇದರಲ್ಲಿ ಆರು ವಯಸ್ಕರು ಮತ್ತು ಇಬ್ಬರು ಮಕ್ಕಳು ಸೇರಿದ್ದಾರೆ' ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಸೀನ್ ಡುಲುಡೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮೊದಲ 6 ಜನರ ಮೃತದೇಹಗಳನ್ನು ಗುರುವಾರ ತಡರಾತ್ರಿ ಹೊರತೆಗೆಯಲಾಯಿತು. ನಂತರ ಶವ ಪತ್ತೆಯಾದ ಇಬ್ಬರಲ್ಲಿ ರೊಮೇನಿಯನ್ ಮೂಲದ ಶಿಶು ಮತ್ತು ಭಾರತೀಯ ಮಹಿಳೆ ಸೇರಿದ್ದಾರೆ.