ಹೊಸದಿಲ್ಲಿ: ಇಂಡಿಯಾ ಓಪನ್ ಶೂಟಿಂಗ್ - ಆಕಾಂಕ್ಷಾ, ಕರಣ್ ಗೆ ಚಾಂಪಿಯನ್ ಪಟ್ಟ

ಹೊಸದಿಲ್ಲಿ: ಸಿಐಎಸ್‌ಎಫ್ ನ ಆಕಾಂಕ್ಷಾ ಬನ್ಸಾಲ್ ಹಾಗೂ ಹರ್ಯಾಣದ ಕರಣ್ ಸೆಹ್ರಾವತ್ ಅವರು ಹೊಸದಿಲ್ಲಿಯುಲ್ಲಿ ನಡೆಯುತ್ತಿರುವ 11ನೇ ಇಂಡಿಯಾ ಓಪನ್ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಕ್ರಮವಾಗಿ ಮಹಿಳೆಯರು ಮತ್ತು ಪುರುಷರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಆಕಾಂಕ್ಷಾ ಉತ್ತರ ಪ್ರದೇಶದ ಯಾಶಿಕಾ ಗೋಯೆಲ್ ವಿರುದ್ಧ 17-15 ಅಂತರದಲ್ಲಿ ಚಿನ್ನದ ಪದಕ ಗೆದ್ದರೆ, ಕರಣ್ ಉತ್ತರಾಖಂಡದ ಅಕ್ಷಿತ್ ಚೌಹಾಣ್ ವಿರುದ್ಧ 16-8 ಅಂತರದಲ್ಲಿ ಗೆಲುವು ಸಾಧಿಸಿದರು.
ಅರ್ಹತಾ ಸುತ್ತಿನಲ್ಲಿ 570 ಅಂಕ ಗಳಿಸಿದ ಆಕಾಂಕ್ಷಾ 33 ಅಂಕ ಗಳಿಸಿ ಎರಡನೇ ಸ್ಥಾನ ಪಡೆದರೆ, ನಾಕೌಟ್ ಸುತ್ತಿನಲ್ಲಿ 145.4 ಅಂಕ ಗಳಿಸಿದರು.
ಮತ್ತೊಂದೆಡೆ, ಕರಣ್ ತನ್ನ ಅರ್ಹತಾ ಸುತ್ತಿನಲ್ಲಿ 573 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು ಮತ್ತು ನಂತರ ನಾಕೌಟ್ ಸುತ್ತಿನಲ್ಲಿ 152.1 ಅಂಕಗಳನ್ನು ಗಳಿಸಿದರು.