ಹೆಂಡತಿಯನ್ನು ಕೊಂದು ದೇಹದ ಮೇಲೆ ಉಪ್ಪು ಹಾಕಿ ಯಾರಿಗೂ ಡೌಟ್ ಬರದಂತೆ ತರಕಾರಿ ಬೆಳೆದ ಭೂಪ..!

ಹೆಂಡತಿಯನ್ನು ಕೊಂದು ದೇಹದ ಮೇಲೆ ಉಪ್ಪು ಹಾಕಿ ಯಾರಿಗೂ ಡೌಟ್ ಬರದಂತೆ ತರಕಾರಿ ಬೆಳೆದ ಭೂಪ..!

ಕ್ನೋ: ವ್ಯಕ್ತಿಯೊಬ್ಬ ಹೊಲವೊಂದರಲ್ಲಿ ಪತ್ನಿಯನ್ನು (Wife) ಕೊಂದು ಆಕೆಯ ಶವವನ್ನು ಹೂತಿಟ್ಟ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ಪ್ರದೇಶದಲ್ಲಿ ನಡೆದಿದೆ. ದಿನೇಶ್ ಬಂಧಿತ ಆರೋಪಿ. ದಿನೇಶ್ ತರಕಾರಿ ಬೆಳೆಗಾರನಾಗಿದ್ದ.

ದಿನೇಶ್ ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿದ್ದ. ಈ ಹಿನ್ನೆಲೆಯಲ್ಲಿ ಕೋಪಗೊಂಡ ದಿನೇಶ್ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಶವವನ್ನು ಒಂದು ದಿನ ಮನೆಯಲ್ಲಿಟ್ಟು ಹೊಲದಲ್ಲಿ ಹೂತಿದ್ದಾನೆ.ಅಷ್ಟೇ ಅಲ್ಲದೇ ಶವ ಬೇಗನೇ ಕೊಳೆಯಲಿ ಎಂದು 30 ಕೆ.ಜಿ ಉಪ್ಪನ್ನು (Salt) ದೇಹದ ಮೇಲೆ ಹಾಕಿದ್ದ. ಅದಾದ ಬಳಿಕ ಕೊಲೆಯನ್ನು ಮುಚ್ಚಿ ಹಾಕಲು,ಶವವನ್ನು ಹೂತು ಹಾಕಿರುವುದು ಯಾರಿಗೂ ಅನುಮಾನ ಬರಬಾರದೆಂದು ಶವವನ್ನು ಹೂತು ಹಾಕಿದ್ದ ಸ್ಥಳದಲ್ಲಿ ತರಕಾರಿಗಳನ್ನು (Vegetable) ಬೆಳೆದಿದ್ದ. ಅದಾದ ಕೆಲ ದಿನಗಳ ನಂತರ ದಿನೇಶ್ ತನ್ನ ಪತ್ನಿ ಕಾಣೆ ಆಗಿದ್ದಾಳೆ ಎಂದು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದಾಗ ದಿನೇಶ್ ತನ್ನ ಪತ್ನಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಆಕೆಯನ್ನು ಕೊಲೆ ಮಾಡಿರುವುದಾಗಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ದಿನೇಶ್‍ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತನ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.