ಹುಲಿಯ ಹಲ್ಲುಗಳು, ಉಗುರುಗಳ ಸಾಗಣೆ; ಇಬ್ಬರ ಬಂಧನ

ಹುಲಿಯ ಹಲ್ಲುಗಳು, ಉಗುರುಗಳ ಸಾಗಣೆ; ಇಬ್ಬರ ಬಂಧನ

ನೂರು : ಅಕ್ರಮವಾಗಿ ಹುಲಿಯ ಹಲ್ಲುಗಳು ಹಾಗೂ ಹುಲಿ ಉಗರುಗಳನ್ನು ಸಾಗಣೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಲೊಕ್ಕನಹಳ್ಳಿ ಹೋಬಳಿಯ ಅಂಡೆ ಕುರುಬರ ದೊಡ್ಡಿ ಗ್ರಾಮದ ಗೋಪಾಲ ಬಿನ್ ದೇವ ನಾಯಕ (37) ಹಾಗೂ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಗೊರೆ ಬಾಳ ಗ್ರಾಮದ ಹನುಮೇಶ್ ಬಿನ್ ಲೇಟ್ ಹೊನ್ನಪ್ಪ (29) ಬಂಧಿತ ಆರೋಪಿಗಳಾಗಿದ್ದಾರೆ.

ಘಟನೆಯ ವಿವರ : ಸೋಮವಾರ ರಾತ್ರಿ 8:00 ಸಮಯದಲ್ಲಿ ಹನೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಿ ಜಿ ಪಾಳ್ಯ ಗ್ರಾಮದ ಅಡ್ಡ ರಸ್ತೆ ಮಾರ್ಗವಾಗಿ ದ್ವಿಚಕ್ರವಾಹನ ಸಂಖ್ಯೆ ka-10 ಎಲ್ 3616 ಸಂಖ್ಯೆಯ ಮೋಟಾರ್ ಬೈಕ್ ನಲ್ಲಿ ಇಬ್ಬರು ವ್ಯಕ್ತಿಗಳು ಹುಲಿಯ ಉಗುರುಗಳನ್ನು ಅಕ್ರಮವಾಗಿ ಕಳ್ಳ ಮಾರುಕಟ್ಟೆಗೆ ಕೊಳ್ಳೇಗಾಲ ಕಡೆಗೆ ಮಾರಾಟ ಮಾಡಲು ಸಾಗಣೆ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ( ಎಫ್‌ಎಂಎಸ್ ) ದಳದ ಸಬ್ ಇನ್ಸ್ಪೆಕ್ಟರ್ ವಿಜಯ ರಾಜ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಹುಲಿಯ 40 ಉಗುರುಗಳು ಹಾಗೂ ಹುಲಿಯ ಎರಡು ಹಲ್ಲುಗಳನ್ನು ವಶಪಡಿಸಿಕೊಂಡಿದ್ದು ಇವರ ವಿರುದ್ಧ ವನ್ಯಜೀವಿ ಕಾಯ್ದೆ,2972 ಶೆಡ್ಯೂಲ್ ಒಂದರ ಅಡಿಯಲ್ಲಿ 39(ಡಿ ) 50,51, ರ ಅಡಿ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ದಾಳಿಯಲ್ಲಿ ಅರಣ್ಯ ಸಂಚಾರಿ ( ಎಫ್‌ಎಂಎಸ್ ) ದಳದ ಮುಖ್ಯಪೇದೆಗಳಾದ ಸ್ವಾಮಿ ತಕೀಉಲ್ಲಾ, ರಾಮಚಂದ್ರ, ಬಸವರಾಜು, ಶಂಕರ್ ಚಾಲಕ ಪ್ರಭಾಕರ್ ಪಾಲ್ಗೊಂಡಿದ್ದರು