ವಿಪಕ್ಷ ನಾಯಕನಾಗಿ ಮಾತು ಸರಿಯಲ್ಲ: ಸಿದ್ದರಾಮಯ್ಯ ವಿರುದ್ಧ ಬಿಎಸ್‌ ವೈ ವಾಗ್ದಾಳಿ

ವಿಪಕ್ಷ ನಾಯಕನಾಗಿ ಮಾತು ಸರಿಯಲ್ಲ: ಸಿದ್ದರಾಮಯ್ಯ ವಿರುದ್ಧ ಬಿಎಸ್‌ ವೈ ವಾಗ್ದಾಳಿ

ಬೆಂಗಳೂರು: ಅಧಿವೇಶನದಲ್ಲಿ ನಾನು ಇರಲ್ಲ ಅಂತಾ ಸಿದ್ದರಾಮಯ್ಯ ಹೇಳಿಕೆ ಮಾಜಿ ಸಿಎಂ ಯಡಿಯೂರಪ್ಪ ಕೆಂಡಾಮಂಡಲಾಗಿದ್ದಾರೆ. ವಿಪಕ್ಷ ನಾಯಕನಾಗಿ ಈ ರೀತಿ ಹೇಳಿಕೆ ನೀಡುವುದು ಅವರಿಗೆ ಗೌರವ ತರುವುದಿಲ್ಲ ಎಂದು ಬಿ.ಎಸ್‌ ಯಡಿಯೂರಪ್ಪ ಕಿಡಿಕಾರಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಪ್ರಜಾತಂತ್ರ ವ್ಯವಸ್ಥೆಯಲ್ಲಿಆ ರೀತಿಯಾಗಿ ನಡೆದುಕೊಳ್ಳಬಹುದಾ? ಕಾಂಗ್ರೆಸ್‌ ಪಕ್ಷದವರಿಗೆ ಕೇವಲ ಚುನಾವಣೆಯೇ ಮುಖ್ಯವಾಯ್ತಾ? ಎಂದು ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಕಾಂಗ್ರೆಸ್‌ ನಾಯಕರು ಆರೋಪ ಮಾಡಿ ಹುಚ್ಚುಚ್ಚಾಗಿ ಆಡೋದು ಬಹಳ ಜಾಸ್ತಿಯಾಗಿದೆ. ಆದರೆ ಡಿ.ಕೆ ಶಿವಕುಮಾರ್‌ ತಮ್ಮ ಜವಾಬ್ದಾರಿ ಅರಿತು ಮಾತನಾಡಬೇಕು. ಡಿ.ಕೆ ಶಿವಕುಮಾರ್‌ ಈ ಮಟ್ಟಕ್ಕೆ ಇಳಿದಿರುವುದು ನನಗೆ ತುಂಬಾ ನೋವು ತಂದಿದೆ.ಇನ್ನೂದ್ರೂ ಜವಾಬ್ದಾರಿಯತವಾಗಿ ಮಾತನಾಡಲಿ ಎಂದು ಹೇಳಿದ್ದಾರೆ.