ರಾಜ್ಯ ಸರ್ಕಾರ ಮತ್ತೆ ಗೋಲ್ಮಾಲ್ ನಲ್ಲಿ ತೊಡಗಿದೆ : ಡಿ.ಕೆ. ಶಿವಕುಮಾರ್ ಆರೋಪ

ರಾಜ್ಯ ಸರ್ಕಾರ ಮತ್ತೆ ಗೋಲ್ಮಾಲ್ ನಲ್ಲಿ ತೊಡಗಿದೆ : ಡಿ.ಕೆ. ಶಿವಕುಮಾರ್ ಆರೋಪ

ಬೆಂಗಳೂರು : ರಾಜ್ಯ ಸರ್ಕಾರವು ಮತ್ತೆ ಗೋಲ್ಮಾಲ್ ನಲ್ಲಿ ತೊಡಗಿದ್ದು, ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ತರಾತುರಿ ಟೆಂಡರ್ ನೀಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ತರಾತುರಿ ಟೆಂಡರ್ ನೀಡಲಾಗುತ್ತಿದೆ.

500 ಕೋಟಿ ಇದ್ದರೇ 1000 ಕೋಟಿಗೆ ಟೆಂಡರ್ ಮಾರಾಟ ಮಾಡಲಾಗುತ್ತಿದೆ. ಇದನ್ನು ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಪ್ರಸ್ತಾಪಿಸಿದ್ದಾರೆ. ಈ ಭ್ರಷ್ಟ ಸರ್ಕಾರ ಇನ್ನೂ 1 ತಿಂಗಳು ಮಾತ್ರ ಅಧಿಕಾರದಲ್ಲಿರಲಿದೆ. ಎಲ್ಲ ಇಲಾಖೆಗಳಲ್ಲಿ ವಸೂಲಿ ಮಾಡಿ ಚುನಾವಣೆಗೆ ಹೋಗುತ್ತಿದ್ದಾರೆ. ಬಿಜೆಪಿ ಶಾಸಕರೇ ಪತ್ರ ಬರೆದು ನಮಗೆ ಮಾಹಿತಿ ನೀಡಿದ್ದಾರೆ ಎಂದರು.

ರಾಜ್ಯದಲ್ಲಿ ಮುಂದಿನ 45 ದಿನಗಳ ಬಳಿಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಅಧಿಕಾರಕ್ಕೆ ಬಂದ ಬಳಿಕ ಹಿಂದಿನ ಎಲ್ಲಾ ಟೆಂಡರ್ ಗಳನ್ನು ರದ್ದು ಪಡಿಸಿ ತನಿಖೆಗೆ ನೀಡುತ್ತೇವೆ. ವಿಧಾನಸಭೆ ಚುನಾವಣೆಗೆ ದುಡ್ಡು ಮಾಡಲು ಸರ್ಕಾರ ಹೊರಟಿದೆ ಎಂದು ಕಿಡಿಕಾರಿದ್ದಾರೆ.