ಸರ್ಕಾರಿ ನೌಕರರ ಮುಷ್ಕರ ಎಫೆಕ್ಟ್: SSLC ಪರೀಕ್ಷೆ ಮುಂದೂಡಿಕೆ

ಸರ್ಕಾರಿ ನೌಕರರ ಮುಷ್ಕರ ಎಫೆಕ್ಟ್: SSLC ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಮುಷ್ಕರ ಪರಿಣಾಮ ಇಂದು ನಡೆಯಬೇಕಿದ್ದ ಎಸ್‌ಎಸ್‌ಎಲ್ಸಿ ಪೂರ್ವಭಾವಿ ಪರೀಕ್ಷೆ ಮುಂದೂಡಲಾಗಿದೆ.

ಇಂದು ನಡೆಯಬೇಕಿದ್ದ ಎಸ್‌ಎಸ್‌ಎಲ್ಸಿ ತೃತೀಯ ಭಾಷೆ ಹಿಂದಿ ವಿಷಯದ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡಲಾಗಿದೆ.

ಮಾರ್ಚ್ 6 ರಂದು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

ಈ ಮೂಲಕ ಎಸ್‌ಎಸ್‌ಎಲ್ಸಿ ಪೂರ್ವಭಾವಿ ಪರೀಕ್ಷೆಗೂ ಮುಷ್ಕರದ ಬಿಸಿ ತಟ್ಟಿದೆ. ಕರ್ತವ್ಯಕ್ಕೆ ಗೈರು ಹಾಜರಾಗಲು ಪ್ರೌಢಶಾಲಾ ಶಿಕ್ಷಕರ ಸಂಘ ತೀರ್ಮಾನಿಸಿದೆ. ಇಂದು ಕರ್ತವ್ಯಕ್ಕೆ 80,000 ಪ್ರೌಢಶಾಲೆ ಶಿಕ್ಷಕರು ಗೈರು ಹಾಜರಾಗಿದ್ದಾರೆ. ಹೀಗಾಗಿ ಇಂದು ನಡೆಯಬೇಕಿದ್ದ ಹಿಂದಿ ವಿಷಯದ ಪೂರ್ವಭಾವಿ ಪರೀಕ್ಷೆ ಮುಂದೂಡಲಾಗಿದೆ ಎನ್ನಲಾಗಿದೆ.