ಶೇ. 15 ರಷ್ಟು ವೇತನ ಹೆಚ್ಚಳ : ಮಾ.21 ರಂದು ಕರೆ ನೀಡಿದ್ದ ಸಾರಿಗೆ ನೌಕರರ ಮುಷ್ಕರ ವಾಪಸ್

ಶೇ. 15 ರಷ್ಟು ವೇತನ ಹೆಚ್ಚಳ : ಮಾ.21 ರಂದು ಕರೆ ನೀಡಿದ್ದ ಸಾರಿಗೆ ನೌಕರರ ಮುಷ್ಕರ ವಾಪಸ್

ಬೆಂಗಳೂರು: ಸಾರಿಗೆ ನೌಕರರಿಗೆ ಶೇ. 15 ರಷ್ಟು ವೇತನಕ್ಕೆ ರಾಜ್ಯ ಸರ್ಕಾರ ಸಮ್ಮತಿ ನೀಡಿರುವ ಹಿನ್ನೆಲೆಯಲ್ಲಿ ಮಾ.21 ರಿಂದ ಕರೆ ನೀಡಲಾಗಿದ್ದ 'ಸಾರಿಗೆ ನೌಕರ'ರ ( Transport employee's Bus Strike) ಮುಷ್ಕರ ವಾಪಸ್ ಪಡೆಯಲಾಗಿದೆ.

ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಮಾರ್ಚ್ 21ರಿಂದ ಸಾರಿಗೆ ನೌಕರರು ಮುಷ್ಕರ ನಡೆಸೋದಕ್ಕೆ ಕರೆ ನೀಡಿದ್ದರು. ಆದರೆ ಇದೀಗ ಸಾರಿಗೆ ನೌಕರರು ಮುಷ್ಕರ ವಾಪಸ್ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. 8 ಟ್ರೇಡ್ ಯೂನಿಯನ್ ಗಳು 20 % ವೇತನ ಹೆಚ್ಚಳಕ್ಕೆ ಆಗ್ರಹಿಸಿ ಮುಷ್ಕರಕ್ಕೆ ಕರೆ ನೀಡಿದ್ದರು. 15 % ವೇತನ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಅಲ್ಲದೇ ನೌಕರರ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಒಪ್ಪಿಗೆ ನೀಡಿದ್ದು, ಮಾ.21 ರಂದು ಕರೆ ನೀಡಲಾಗಿದ್ದ 'ಸಾರಿಗೆ ನೌಕರ'ರ ಮುಷ್ಕರ ವಾಪಸ್ ಪಡೆಯಲಾಗಿದೆ.

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಾರ್ಚ್ 21ರಿಂದ ಮುಷ್ಕರ ನಡೆಯಲಿದೆ ಎಂಬುದಾಗಿ ಸಾರಿಗೆ ನೌಕರರ ಮುಖಂಡ ಅನಂತ ಸುಬ್ಬರಾವ್ ಕರೆ ನೀಡಿದ್ದರು. ಸಾರಿಗೆ ನೌಕರರ ಮುಷ್ಕರವನ್ನು ನಡೆಸಲು ಮಾರ್ಚ್ 21ರಂದು ಕರೆ ನೀಡಲಾಗಿದೆ. ಇದು ಜನರಿಗೆ ತೊಂದರೆ ಮಾಡುವ ಉದ್ದೇಶದಿಂದ ಅಲ್ಲ. ವಜಾಗೊಂಡಿರುವ ಸಿಬ್ಬಂದಿಗಳನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದರು.