ಶಿವಮೊಗ್ಗದಲ್ಲಿ ಬೆಂಕಿ ಹೊತ್ತಿ ಉರಿದ ಡಸ್ಟರ್‌ ಕಾರು; ಮಾಲೀಕನ ಪತ್ತೆಗೆ ಹುಡುಕಾಟ

ಶಿವಮೊಗ್ಗದಲ್ಲಿ ಬೆಂಕಿ ಹೊತ್ತಿ ಉರಿದ ಡಸ್ಟರ್‌ ಕಾರು; ಮಾಲೀಕನ ಪತ್ತೆಗೆ ಹುಡುಕಾಟ

ಶಿವಮೊಗ್ಗ: ಜಿಲ್ಲೆಯ ಬೀರನಕೆರೆ ಗ್ರಾಮದ ಬಳಿ ಡಸ್ಟರ್‌ ಕಾರು ಹೊತ್ತಿ ಉರಿದಿದೆ. ರಸ್ತೆ ಪಕ್ಕ ನಿಂತಿದ್ದ ಡಸ್ಟರ್ ಕಾರು ಬೆಂಕಿಗೆ ಆಹುತಿ ಆಗಿದೆ. ಶಾರ್ಟ್ ಸರ್ಕ್ಯೂಟ್ ಕಾರಣ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.

ಕಾರು ಯಾರದ್ದು ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ.ಕೂಡಲೇ ವಿಷಯ ತಿಳಿದ ಗ್ರಾಮಾಂತರ ಪೊಲೀಸರು ಅಗ್ನಿ ಶಾಮಕ ದಳವನ್ನು ಕರೆಯಿಸಿ ಬೆಂಕಿ ನಂದಿಸಿದ್ದಾರೆ.ಕಾರಿನಲ್ಲಿ ಯಾರು ಇರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ವಾಹನದ ಮಾಲೀಕರನ್ನು ಪತ್ತೆ ಹಚ್ಚುವ ಕಾರ್ಯವನ್ನು ಪೊಲೀಸ್ ಇಲಾಖೆ ನಡೆಸಿದೆ. ಕೆಲ ಸ್ಥಳೀಯರ ಪ್ರಕಾರ ಕಾರಿಗೆ ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೇ ಕಾರಿನಲ್ಲಿದ್ದ ಇಬ್ಬರು ಹೊರಗಿಳಿದು ಹೋಗಿದ್ದಾರೆ ಎನ್ನಲಾಗಿದೆ.