ಶಿವಮೊಗ್ಗ: ಸಚಿವ ಡಾ.ಅಶ್ವತ್ ನಾರಾಯಣರವರ ಮೇಲೆ ಕಾನೂನು ಕ್ರಮ ಜರುಗಿಸಲು ದೂರು ದಾಖಲು

ಶಿವಮೊಗ್ಗ: ಸಚಿವ ಡಾ.ಅಶ್ವತ್ ನಾರಾಯಣರವರ ಮೇಲೆ ಕಾನೂನು ಕ್ರಮ ಜರುಗಿಸಲು ದೂರು ದಾಖಲು

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ನವರನ್ನು ಮುಗಿಸಿಬಿಡಬೇಕೆಂದು ಬಹಿರಂಗವಾಗಿ ಹತ್ಯೆಗೆ ಪ್ರಚೋದನೆ ನೀಡಿದ್ದ ಸಚಿವ ಡಾ.ಅಶ್ವತ್ ನಾರಾಯಣರವರ ಮೇಲೆ ಕಾನೂನು ಕ್ರಮ ಜರುಗಿಸಲು ದೂರು ದಾಖಲಿಸಲಾಯಿತು.

ದಿನಾಂಕ: 13-02-2023 ರಂದು ಮಂಡ್ಯ ಜಿಲ್ಲೆಯ, ಸಾತನೂರು ಗ್ರಾಮದ, ಕಂಬದ ನರಸಿಂಹ ದೇವಸ್ಥಾನದ ಆವರಣದಲ್ಲಿ ಬಿ.ಜೆ.ಪಿ. ಪಕ್ಷದ ಮಹಾ ಶಕ್ತಿ ಕೇಂದ್ರ ಸಭೆಯಲ್ಲಿ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ ನಾರಾಯಣ ಬಿನ್ ಟಿ.ಕೆ.ನಾರಾಯಣಪ್ಪ ರಾಜ್ಯದ ಮಾಜಿ ಮುಖ್ಯ ಮಂತ್ರಿಗಳು ಹಾಗೂ ಹಾಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ನವರನ್ನು ಒಡೆದು ಮುಗಿಸಬೇಕು ಎಂದು ಬಹಿರಂಗವಾಗಿ ಹತ್ಯೆಯ ಪ್ರಚೋದನಕಾರಿ ಹೇಳಿಕೆಯನ್ನು ನೀಡಿರುತ್ತಾರೆ. ಕೂಡಲೆ ಈ ಹೇಳಿಕೆ ನೀಡಿದ ಇವರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಿ ಬಂಧಿಸಬೇಕೆಂದು ಆಗ್ರಹಿಸಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ ಪ್ರವೀಣ್ ಕುಮಾರ್ ನೇತೃತ್ವದಲ್ಲಿ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್ ,ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್ ಪಿ ಗಿರೀಶ್ , ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ಲೋಕೇಶ್, ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಎಸ್ ಕುಮರೇಶ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಎಂ ರಾಹುಲ್ , ರಾಕೇಶ್ ನದೀಮ್, ಪ್ರಮುಖರಾದ ಆದಿಲ್ ಭಾಷಾ ,ಸಚಿನ್, ಆಸಿಮ್ ಖಾನ್, ಅಕ್ಷಯ್ ಇತರರು ಇದ್ದರು.