ಶಿವಮೊಗ್ಗ: ಬೃಹತ್ ಪ್ರತಿಭಟನೆ ನಡೆಸಿದ ಗುತ್ತಿಗೆ ಕಾರ್ಮಿಕರ ಸಂಘಟನೆ

ಶಿವಮೊಗ್ಗ: ಬೃಹತ್ ಪ್ರತಿಭಟನೆ ನಡೆಸಿದ ಗುತ್ತಿಗೆ ಕಾರ್ಮಿಕರ ಸಂಘಟನೆ

ಶಿವಮೊಗ್ಗ: ವಿಐಎಸ್‌ಎಲ್ ಕಾರ್ಖಾನೆ ಉಳಿಸಿ ಎಂದು ಹೋರಾಟ ಆರಂಭವಾಗಿ ಇವತ್ತಿಗೆ ಒಂದು ತಿಂಗಳು ಕಳೆದಿದ್ದು ಫೆ. 17ಕ್ಕೆ ಗುತ್ತಿಗೆ ಕಾರ್ಮಿಕರ ಸಂಘಟನೆ ಶಿವಮೊಗ್ಗ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದೆ.

ಭದ್ರಾವತಿ ವಿಐಎಸ್ ಎಲ್ ನಿಂದ ಬೈಕ್ ರ‍್ಯಾಲಿಯಲ್ಲಿ ಬಂದ ಕಾರ್ಮಿಕರು ಶಿವಮೊಗ್ಗ ಸೈನ್ಸ್ ಮೈದಾನ ತಲುಪಿ ನಂತರ ಅಲ್ಲಿಂದ ಕಾಲ್ನಡಿಗೆ ಮೂಲಕ ಗೋಪಿವೃತ್ತ ಮತ್ತು ಮಹಾವೀರ ವೃತ್ತದ ವರೆಗೆ ಬಂದು ತಲುಪಿದರು.

ಮಹಾವೀರ ವೃತ್ತದ ಬಳಿ ಬಂದ ಪ್ರತಿಭಟನೆ ಮಹಾವೀರ ವೃತ್ತದಲ್ಲಿ ಸುತ್ತುವರೆದು ರಸ್ತೆಯನ್ನ ತಡೆಯಲಾಗಿತ್ತು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ ಪ್ರಧಾನಿ ಮೋದಿಗೆ ಕಳುಹಿಸುವಂತೆ ಒತ್ತಾಯಿಸಲಾಯಿತು.

ಈ ವೇಳೆ ನಾಲ್ಕು ಕಡೆಯಿಂದ ಬಂದ ವಾಹನಗಳು ಜ್ಯಾಮ್ ಆಗಿದ್ದವು. ಇದೇ ವೇಳೆ ಜೀರೋ ಟ್ರಾಫಿಕ್ ನಲ್ಲಿ ಬಂದ ಅಂಬ್ಯುಲೆನ್ಸ್ ಗೆ ದಾರಿ ಮಾಡಿಕೊಟ್ಟು ಹೋರಾಟಗಾರರು ಮಾನವೀಯತೆ ಮೆರೆದರು.