ವಾಹನ ಸವಾರರೇ ಎಚ್ಚರ ; ನೀವು ಈ ತಪ್ಪುಗಳನ್ನ ಮಾಡಿದ್ರೆ ₹40,000 ದಂಡ ಪಾವತಿಸ್ಬೇಕಾಗುತ್ತೆ
ಕೆಎನ್ಎನ್ಡಿಜಿಟಲ್ ಡೆಸ್ಕ್ : ಈ ದಿನದಲ್ಲಿ ಟ್ರಾಫಿಕ್ ರೂಲ್ಸ್ ಪಾಲಿಸುತ್ತಾ ಎಚ್ಚರಿಕೆಯಿಂದ ವಾಹನವನ್ನ ಓಡಿಸಿದ್ರೆ ಮಾತ್ರ ನಾವು ಸುರಕ್ಷಿತವಾಗಿ ಮನೆಗೆ ಸೇರಿಕೊಳ್ಳಬಹುದು. ಅನೇಕ ವ್ಯಕ್ತಿಗಳು ರಾಂಗ್ ಸೈಡ್ ಡ್ರೈವಿಂಗ್, ಸಿಗ್ನಲ್ ಬ್ರೇಕ್ ಮಾಡುವುದು ಮುಂತಾದವುಗಳನ್ನ ಮಾಡುತ್ತಾರೆ.
ಮೋಟಾರು ವಾಹನ ಕಾಯ್ದೆಯ ಪ್ರಕಾರ, ಕೇಂದ್ರ, ರಾಜ್ಯಗಳ ಸರ್ಕಾರಿ ಸಂಚಾರಿ ನಿಯಮ ಉಲ್ಲಂಘನೆಗೆ ಹಲವು ವಿಧದ ಭಾರೀ ದಂಡಗಳನ್ನ ಹಾಕಲಾಗ್ತಿದೆ. ಇದರ ಹೊರತಾಗಿಯೂ ಸಂಚಾರ ನಿಯಮಗಳನ್ನ ಉಲ್ಲಂಘಿಸುವ ಜನರ ಸಂಖ್ಯೆ ಹೆಚ್ಚಾಗಿದೆ. ಅಂತಹ ಜನರಿಗೆ ಒಂದು ದೊಡ್ಡ ಎಚ್ಚರಿಕೆ ಇದೆ. ಸಂಚಾರಿ ನಿಯಮಗಳನ್ನ ಉಲ್ಲಂಘಿಸಿದ್ರೆ, ದಂಡ ಮಾತ್ರವಲ್ಲ ಜೈಲುವಾಸದ ಸಾಧ್ಯತೆಯೂ ಇದೆ. ಅಲ್ಲದೇ, ನೀವು ಒಂದೇ ಸಮಯದಲ್ಲಿ ಅನೇಕ ಸಂಚಾರ ನಿಯಮಗಳನ್ನ ಉಲ್ಲಂಘಿಸಿದ್ರೆ, ಏಕಕಾಲದಲ್ಲಿ ಅನೇಕ ಸಂಚಾರಿ ನಿಯಮಗಳನ್ನ ಉಲ್ಲಂಘಿಸಿದ್ದಕ್ಕಾಗಿಭಾರಿ ದಂಡವನ್ನು ವಿಧಿಸಬಹುದು.
ಉದಾಹರಣೆಗೆ, ನೀವು ಅನರ್ಹ ಚಾಲನಾ ಪರವಾನಗಿಯನ್ನ ಹೊಂದಿರುವ ಕಾರನ್ನ ಹೊಂದಿದ್ದರೆ, ಕುಡಿದು ಮತ್ತು ವಿಮೆಯಿಲ್ಲದೇ ವೇಗದ ಚಾಲನೆ ಮಾಡಿದ್ರೆ, ಎಲ್ಲಾ ಉಲ್ಲಂಘನೆಗಳಿಗೆ ದಂಡವನ್ನ ವಿಧಿಸಲಾಗುತ್ತದೆ. ನೀವು ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿದ್ರೆ, ಮೊದಲ ಬಾರಿಗೆ ₹10,000 ರೂ.ಗಳ ದಂಡ, ಎರಡನೇ ಬಾರಿಗೆ ₹15,000 ರೂ.ಗಳ ದಂಡ, ಅನರ್ಹ ಚಾಲನಾ ಪರವಾನಗಿಯೊಂದಿಗೆ ವಾಹನ ಚಲಾಯಿಸಿದರೆ ₹10,000 ರೂ., ವಿಮೆ ಇಲ್ಲದೇ ವಾಹನ ಚಲಾಯಿಸಿದರೆ ₹2,000 ರಿಂದ ₹4 ಸಾವಿರದವರೆಗೆ. ಅಲ್ಲದೇ, ಮೊದಲ ಬಾರಿಗೆ ದುಡುಕಿನ ಚಾಲನೆಗೆ ₹5000, ಎರಡನೇ ಬಾರಿ ₹10,000. ಕೆಲವೊಮ್ಮೆ ದಂಡದೊಂದಿಗೆ ಜೈಲಿಗೆ ಹೋಗುವ ಸಾಧ್ಯತೆ ಇರುತ್ತದೆ. ಇದೆಲ್ಲವನ್ನೂ ಸಂಯೋಜಿಸಿದ್ರೆ, ನಿಮ್ಮ ಮೇಲೆ ಬೀಳುವ ದಂಡ ನಿಮಗೆ ಖಂಡಿತ ಹೊರೆಯಾಗುತ್ತೆ. ಭಾರಿ ದಂಡಗಳನ್ನ ತಪ್ಪಿಸಲು, ಸಂಚಾರಿ ನಿಯಮಗಳನ್ನ ಪಾಲಿಸಿ. ಈ ಮೂಲಕ ಸುರಕ್ಷಿತವಾಗಿ ಮನೆ ತಲುಪಿ.