ರಾಜ್ಯದ ರೈಲ್ವೆ ಪ್ರಯಾಣಿಕರೇ ಗಮನಿಸಿ: ಈ ಭಾಗದ ಕೆಲವು ರೈಲುಗಳ ಸೇವೆಯಲ್ಲಿ ಬದಲಾವಣೆ, ಇಲ್ಲಿದೆ ಮಾಹಿತಿ

ಬೆಂಗಳೂರು: ಚಿಕ್ಕಜಾಜೂರು-ಹುಬ್ಬಳ್ಳಿ ಭಾಗದ ಜೋಡಿ ಮಾರ್ಗದ ಸಂಶಿ ದ್ವಿತೀಯ ಹಂತದ ಎಂಜಿನಿಯರಿಂಗ್ ಕಾಮಗಾರಿ ಸಲುವಾಗಿ ಈ ಕೆಳಗಿನ ಕೆಲವು ರೈಲುಗಳನ್ನು ರದ್ದುಗೊಳಿಸಿ, ಭಾಗಶಃ ರದ್ದುಗೊಳಿಸಿ, ರೈಲುಗಳ ಮಾರ್ಗ ಬದಲಾಣೆ ಹಾಗೂ ಮಾರ್ಗ ಮಧ್ಯ ನಿಯಂತ್ರಿಸಲಾಗುತ್ತದೆ.
ರೈಲುಗಳ ರದ್ದು:
1. ರೈಲು ಸಂಖ್ಯೆ 16214 ಎಸ್.ಎಸ್.ಎಸ್ ಹುಬ್ಬಳ್ಳಿ - ಅರಸೀಕೆರೆ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಮಾರ್ಚ್ 4ರ ವರೆಗೆ ರದ್ದುಗೊಳಿಸಲಾಗಿದೆ.
2. ರೈಲು ಸಂಖ್ಯೆ 16213 ಅರಸೀಕೆರೆ - ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಮಾರ್ಚ್ 1 ರಿಂದ 5ರ ವರೆಗೆ ರದ್ದುಗೊಳಿಸಲಾಗುತ್ತದೆ.
3. ರೈಲು ಸಂಖ್ಯೆ 17347/48 ಎಸ್‌ಎಸ್‌ಎಸ್ ಹುಬ್ಬಳ್ಳಿ - ಚಿತ್ರದುರ್ಗ - SSS ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ರೈಲುಗಳನ್ನು ಮಾರ್ಚ್ 1 ರಿಂದ 4ರವರೆಗೆ ರದ್ದುಗೊಳಿಸಲಾಗುತ್ತದೆ.
ರೈಲುಗಳು ಭಾಗಶಃ ರದ್ದು:
1. ಮಾರ್ಚ್ 1 ರಿಂದ 4, 2023 ರವರೆಗೆ ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12079 ಕೆಎಸ್‌ಆರ್ ಬೆಂಗಳೂರು ಎಸ್‌ಎಸ್‌ಎಸ್ ಹುಬ್ಬಳ್ಳಿ ದೈನಂದಿನ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲನ್ನು ಹರಿಹರ - ಹುಬ್ಬಳ್ಳಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತದೆ. ಈ ರೈಲು ಹರಿಹರದಲ್ಲಿ ತನ್ನ ಪ್ರಯಾಣ ಕೊನೆಗೊಳಿಸಲಿದೆ.
2. ಮಾರ್ಚ್ 1 ರಿಂದ 4, 2023 ರವರೆಗೆ ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಹೊರಡುವ ರೈಲು ಸಂಖ್ಯೆ 12080 ಎಸ್‌ಎಸ್‌ಎಸ್ ಹುಬ್ಬಳ್ಳಿ - ಕೆಎಸ್‌ಆರ್ ಬೆಂಗಳೂರು ದೈನಂದಿನ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲನ್ನು ಹುಬ್ಬಳ್ಳಿ - ಹರಿಹರ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತದೆ. ಈ ರೈಲು ಹರಿಹರ ನಿಲ್ದಾಣದಿಂದ ತನ್ನ ನಿಗದಿತ ಸಮಯದಲ್ಲಿ ಪ್ರಯಾಣ ಆರಂಭಿಸಲಿದೆ.
ರೈಲುಗಳ ಮಾರ್ಗ ಬದಲಾವಣೆ:
1. ಮಾರ್ಚ್ 1, 2023 ರಂದು ದಾದರ್ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 11021 ದಾದರ್ - ತಿರುನೆಲ್ವೇಲಿ ಎಕ್ಸ್‌ಪ್ರೆಸ್ ರೈಲು ಬದಲಾದ ಮಾರ್ಗ ಎಸ್.ಎಸ್.ಎಸ್ ಹುಬ್ಬಳ್ಳಿ, ಹೊಸಪೇಟೆ ಬೈಪಾಸ್, ಕೊಟ್ಟೂರು, ಅಮರಾವತಿ ಕಾಲೋನಿ ಮತ್ತು ದಾವಣಗೆರೆ ಮೂಲಕ ಸಂಚರಿಸಲಿದೆ. ಈ ಕಾರಣಕ್ಕಾಗಿ ತಪ್ಪಿದ ನಿಲುಗಡೆಗಳು ಎಸ್‌ಎಂಎಂ ಹಾವೇರಿ, ರಾಣೆಬೆನ್ನೂರು ಮತ್ತು ಹರಿಹರ.
2. ಮಾರ್ಚ್ 2, 2023 ರಂದು ದಾದರ್ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 11035 ದಾದರ್ - ಮೈಸೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಬದಲಾದ ಮಾರ್ಗ ಎಸ್.ಎಸ್.ಎಸ್ ಹುಬ್ಬಳ್ಳಿ, ಹೊಸಪೇಟೆ ಬೈಪಾಸ್, ಕೊಟ್ಟೂರು, ಅಮರಾವತಿ ಕಾಲೋನಿ ಮತ್ತು ದಾವಣಗೆರೆ ಮೂಲಕ ಸಂಚರಿಸಲಿದೆ. ಈ ಕಾರಣಕ್ಕಾಗಿ ತಪ್ಪಿದ ನಿಲುಗಡೆಗಳು ಎಸ್‌ಎಂಎಂ ಹಾವೇರಿ, ರಾಣೆಬೆನ್ನೂರು ಮತ್ತು ಹರಿಹರ.
3. ಮಾರ್ಚ್ 2, 2023 ರಂದು ಜೋಧ್‌ಪುರದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16507 ಜೋಧ್‌ಪುರ - ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಬದಲಾದ ಮಾರ್ಗ ಎಸ್.ಎಸ್.ಎಸ್ ಹುಬ್ಬಳ್ಳಿ, ಹೊಸಪೇಟೆ ಬೈಪಾಸ್, ಕೊಟ್ಟೂರು, ಅಮರಾವತಿ ಕಾಲೋನಿ ಮತ್ತು ದಾವಣಗೆರೆ ಮೂಲಕ ಸಂಚರಿಸಲಿದೆ. ಈ ಕಾರಣಕ್ಕಾಗಿ ತಪ್ಪಿದ ನಿಲುಗಡೆಗಳು ಎಸ್‌ಎಂಎಂ ಹಾವೇರಿ, ರಾಣೆಬೆನ್ನೂರು ಮತ್ತು ಹರಿಹರ.
4. ಮಾರ್ಚ್ 3, 2023 ರಂದು ಅಜ್ಮೀರ್‌ನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16209 ಅಜ್ಮೀರ್ - ಮೈಸೂರು ಎಕ್ಸ್‌ಪ್ರೆಸ್ ರೈಲು ಬದಲಾದ ಮಾರ್ಗ ಎಸ್.ಎಸ್.ಎಸ್ ಹುಬ್ಬಳ್ಳಿ, ಗದಗ, ಹೊಸಪೇಟೆ ಬೈ-ಪಾಸ್, ಕೊಟ್ಟೂರು, ಅಮರಾವತಿ ಕಾಲೋನಿ ಮತ್ತು ದಾವಣಗೆರೆ ಮೂಲಕ ಸಂಚರಿಸಲಿದೆ, ಈ ಕಾರಣಕ್ಕಾಗಿ ತಪ್ಪಿದ ನಿಲುಗಡೆಗಳು ಎಸ್‌ಎಂಎಂ ಹಾವೇರಿ, ರಾಣೆಬೆನ್ನೂರು ಮತ್ತು ಹರಿಹರ.
5. ಮಾರ್ಚ್ 3, 2023 ರಂದು ದಾದರ್‌ನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 11005 ದಾದರ್ - ಪುದುಚೇರಿ ರೈಲು ಬದಲಾದ ಮಾರ್ಗ ಎಸ್.ಎಸ್.ಎಸ್ ಹುಬ್ಬಳ್ಳಿ, ಹೊಸಪೇಟೆ ಬೈ-ಪಾಸ್, ಕೊಟ್ಟೂರು, ಅಮರಾವತಿ ಕಾಲೋನಿ ಮತ್ತು ದಾವಣಗೆರೆ ಮೂಲಕ ಸಂಚರಿಸಲಿದೆ, ಈ ಕಾರಣಕ್ಕಾಗಿ ತಪ್ಪಿದ ನಿಲುಗಡೆಗಳು ಎಸ್‌ಎಂಎಂ ಹಾವೇರಿ, ರಾಣೆಬೆನ್ನೂರು ಮತ್ತು ಹರಿಹರ.
6. ಮಾರ್ಚ್ 4, 2023 ರಂದು ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಪ್ರಾರಂಭವಾಗುವ ರೈಲು ಸಂಖ್ಯೆ 20656 ಎಸ್‌ಎಸ್‌ಎಸ್ ಹುಬ್ಬಳ್ಳಿ - ಯಶವಂತಪುರ ಎಕ್ಸ್‌ಪ್ರೆಸ್ ರೈಲು ಬದಲಾದ ಮಾರ್ಗ ಎಸ್.ಎಸ್.ಎಸ್ ಹುಬ್ಬಳ್ಳಿ, ಹೊಸಪೇಟೆ ಬೈ-ಪಾಸ್, ಕೊಟ್ಟೂರು, ಅಮರಾವತಿ ಕಾಲೋನಿ ಮತ್ತು ದಾವಣಗೆರೆ ಮೂಲಕ ಸಂಚರಿಸಲಿದೆ, ಈ ಕಾರಣಕ್ಕಾಗಿ ತಪ್ಪಿದ ನಿಲುಗಡೆಗಳು ಎಸ್‌ಎಂಎಂ ಹಾವೇರಿ ಮತ್ತು ಹರಿಹರ.
ರೈಲುಗಳ ನಿಯಂತ್ರಣ:
1. ಮಾರ್ಚ್ 1, 2023 ರಂದು ಪುದುಚೇರಿಯಿಂದ ಪ್ರಾರಂಭವಾಗುವ ರೈಲು ಸಂಖ್ಯೆ 11006 ಪುದುಚೇರಿ - ದಾದರ್ ಎಕ್ಸ್‌ಪ್ರೆಸ್ ರೈಲುನ್ನು ಮಾರ್ಗ ಮಧ್ಯದಲ್ಲಿ 70 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
2. ಮಾರ್ಚ್ 2 ಮತ್ತು 3, 2023 ರಂದು ತಿರುನೆಲ್ವೇಲಿಯಿಂದ ಪ್ರಾರಂಭವಾಗುವ ರೈಲು ಸಂಖ್ಯೆ 11022 ತಿರುನೆಲ್ವೇಲಿ - ದಾದರ್ ಎಕ್ಸ್‌ಪ್ರೆಸ್ ರೈಲನ್ನು ಮಧ್ಯದಲ್ಲಿ 70 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ