ಆರುವ ಮೊದಲು ದೀಪ ಜೋರಾಗಿ ಉರಿಯುತ್ತದೆ' : ರಾಜ್ಯ ಸರ್ಕಾರಕ್ಕೆ ಟ್ವೀಟ್ ನಲ್ಲಿ ಸಿದ್ದರಾಮಯ್ಯ ಟಾಂಗ್

ಆರುವ ಮೊದಲು ದೀಪ ಜೋರಾಗಿ ಉರಿಯುತ್ತದೆ' : ರಾಜ್ಯ ಸರ್ಕಾರಕ್ಕೆ ಟ್ವೀಟ್ ನಲ್ಲಿ ಸಿದ್ದರಾಮಯ್ಯ ಟಾಂಗ್

ಬೆಂಗಳೂರು : ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಯನ್ನು ಆಲಿಸುವ ಸೌಜನ್ಯವಾದರೂ ರಾಜ್ಯ ಸರ್ಕಾರಕ್ಕೆ ಬೇಡವೇ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಮಾತುಕತೆ ಮೂಲಕ ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆ ಬಗೆಹರಿಸುವ ಪ್ರಯತ್ನವನ್ನೇ ಮಾಡದೆ, ಏಕಾಏಕಿ ಪ್ರತಿಭಟನಾನಿರತ ಮೇಲೆ ಬಲಪ್ರಯೋಗ ಮಾಡುವುದು, ಬಂಧಿಸುವುದು ರಾಜ್ಯ ಸರ್ಕಾರದ ದಾರ್ಷ್ಟ್ಯವನ್ನು ತೋರುತ್ತದೆ.

'ಆರುವ ಮೊದಲು ದೀಪ ಜೋರಾಗಿ ಉರಿಯುತ್ತದೆಯಂತೆ, ಬಿಜೆಪಿ ಸರ್ಕಾರವೂ ಹಾಗೆ ಎಂದು ಸಿದ್ದರಾಮಯ್ಯ ಟ್ವೀಟ್ ನಲ್ಲಿ ಕಿಡಿಕಾರಿದ್ದಾರೆ.

ಕಳೆದ ಮೂರು ದಿನಗಳಿಂದ ಚಳಿ, ಬಿಸಿಲು ಎನ್ನದೆ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದಾರೆ, ಕನಿಷ್ಠ ಪಕ್ಷ ಅವರ ಸಮಸ್ಯೆಯನ್ನು ಆಲಿಸುವ ಸೌಜನ್ಯವಾದರೂ ರಾಜ್ಯಸರ್ಕಾರಕ್ಕೆ ಬೇಡವೇ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.