ಮೇರೆ ಮೀರಿದ ವಿಕೃತಿ ; 20 ತಿಂಗಳ ಕಂದನ ಮೇಲೆ ಅತ್ಯಾಚಾರವೆಸಿಗಿದ ನೆರೆಮನೆಯ ಪಾಪಿ

ಮುಂಬೈ : ಸರ್ಕಾರಗಳು ಎಷ್ಟೇ ಕಠಿಣ ಕಾನೂನುಗಳನ್ನ ತಂದರೂ, ಪೊಲೀಸರು ಎಷ್ಟೇ ಕ್ರಮ ಕೈಗೊಂಡರೂ ಮಕ್ಕಳ ಮೇಲಿನ ಅತ್ಯಾಚಾರ ನಿಲುತ್ತಿಲ್ಲ. ಪ್ರತಿದಿನ ದೇಶದ ಯಾವುದೋ ಒಂದು ಮೂಲೆಯಲ್ಲಿ ಮಕ್ಕಳ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಸಧ್ಯ ಲೈಂಗಿಕ ದೌರ್ಜನ್ಯ ಈ 20 ತಿಂಗಳ ಮಗು ಬಲಿಯಾಗಿದೆ.
20 ತಿಂಗಳ ಹೆಣ್ಣು ಮಗುವಿನ ಮೇಲೆ ನೆರೆಹೊರೆಯಲ್ಲಿ ವಾಸಿಸುವ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಗುವಿನ ಪೋಷಕರು ಆತನ ವಿರುದ್ಧ ದೂರು ನೀಡಲು ಪೊಲೀಸರನ್ನ ಸಂಪರ್ಕಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ದೂರಿನ ಪ್ರಕಾರ, ಮಗುವಿನ ಮನೆಯ ಎದುರು ವಾಸಿಸುವ 35 ವರ್ಷದ ವ್ಯಕ್ತಿ ಎರಡು ದಿನಗಳ ಹಿಂದೆ ಹೆತ್ತವರ ಅನುಪಸ್ಥಿತಿಯಲ್ಲಿ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆಯ ತಂದೆ ತಿಳಿಸಿದ್ದಾರೆ. ಮಗು ಅಳುತ್ತಾ ತನ್ನ ಹೆತ್ತವರಿಗೆ ಹೇಳಿದಾಗ ಈ ವಿಷಯ ಬೆಳಕಿಗೆ ಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ಮತ್ತು ಪೋಕ್ಸೊ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಮತ್ತು ಆತನನ್ನ ಬಂಧಿಸಲಾಗಿದೆ ಎಂದು ಹೇಳಿದರು.