ಸಚಿವ ಸುಧಾಕರ್ ಭ್ರಷ್ಟಾಚಾರದಿಂದ ಅಂದು 36 ಮಂದಿ ರೋಗಿಗಳು ಬಲಿಯಾಗಿದ್ದರು : ಸಿದ್ದರಾಮಯ್ಯ ಗಂಭೀರ ಆರೋಪ

ಚಿಕ್ಕಬಳ್ಳಾಪುರ : ಸಚಿವ ಸುಧಾಕರ್ ಮಾಡಿದ ಭ್ರಷ್ಟಾಚಾರದಿಂದ 36 ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಇಂದು ಚಿಕ್ಕಬಳ್ಳಾಪುರದ ಕೆ.ವಿ ಕ್ಯಾಂಪಸ್ ಬಳಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ ಚಾಮರಾಜನಗರ ಆಕ್ಸಿಜನ್ ದುರಂತದ ಬಗ್ಗೆ ಮಾತನಾಡಿ ಸಚಿವ ಸುಧಾಕರ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಕೊರೊನಾ 2ನೇ ಅಲೆ ತೀವ್ರವಾಗಿದ್ದ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಂಗ್ರಹದ ಅಸಮರ್ಪಕ ನಿರ್ವಹಣೆಯಿಂದ ಸಂಭವಿಸಿದ ದುರಂತ ನಡೆದಿತ್ತು. ಆಕ್ಸಿಜನ್ ಕೊರತೆಯಿಂದಾಗಿ ಜಿಲ್ಲಾಸ್ಪತ್ರೆಯಲ್ಲಿ 36 ಕೊರೊನಾ ರೋಗಿಗಳು ಮೃತಪಟ್ಟಿದ್ದರು. ಮೇ 2, 2021ರಂದು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಮೈಸೂರಿನಿಂದ ಸಕಾಲದಲ್ಲಿ ಆಕ್ಸಿಜನ್ ಪೂರೈಕೆಯಾಗಲಿಲ್ಲ. ರಾತ್ರಿ 10.30ರಿಂದ ಬೆಳಗಿನ ಜಾವ 2.30 ನಡುವೆ ಆಕ್ಸಿಜನ್ ಕೊರತೆ ಉಂಟಾಗಿತ್ತು. ಈ ವಿಚಾರದ ಕುರಿತು ಸಿದ್ದರಾಮಯ್ಯ ಸಚಿವ ಸುಧಾಕರ್ ವಿರುದ್ದ ಕಿಡಿಕಾರಿದ್ದಾರೆ.
ನಿಮಗೆ ಧಮ್ಮಯ್ಯ ಅಂತೀನಿ ಈ ಸುಧಾಕರ್ ನನ್ನು ಸೋಲಿಸಿ, ಮತ್ತೆ ಈತ ಶಾಸಕನಾಗಬಾರದು ಎಂದು ಜನರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಕಾಂಗ್ರೆಸ್ ವಿರುದ್ಧ ಸಚಿವ ಸುಧಾಕರ್ ಭ್ರಷ್ಟಾಚಾರ ಆರೋಪ ಮಾಡಿದ್ದು, ಇದಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.ನಿಮಗೆ ಧಮ್ಮಯ್ಯ ಅಂತೀನಿ ಈ ಸುಧಾಕರ್ ನನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಿ, ಮತ್ತೆ ಈತ ಶಾಸಕನಾಗಬಾರದು ಎಂದಿದ್ದಾರೆ. ಚಿಕ್ಕಬಳ್ಳಾಪುರ ಜನ ಯಾರಿಗೆ ಹೇಳುತ್ತಿರಿ ಅವರಿಗೆ ಟಿಕೆಟ್ ಕೊಡುತ್ತೇನೆ, ಆದರೆ ಈ ಸುಧಾಕರ್ ಮಾತ್ರ ಗೆಲ್ಲಬಾರದು ಎಂದು ಸಿದ್ದರಾಮಯ್ಯ ಹೇಳಿದರು. ನಾನು ಕೋಲಾರದಲ್ಲಿ ನಿಲ್ಲುತ್ತೀನೋ ಇಲ್ವೋ.. ಅವರಿಗ್ಯಾಕೆ ನನ್ನ ಸ್ಪರ್ಧೆಗೂ ಯಡಿಯೂರಪ್ಪಗೆ ಏನು ಸಂಬಂಧ ಎಂದು ಯಡಿಯೂರಪ್ಪಗೆ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.