ಮಾಸ್ಟರ್ ಸ್ಟ್ರೋಕ್ ಕೊಟ್ಟ ಜನಾರ್ದನ ರೆಡ್ಡಿ; ಗೆಳೆಯನಿಗೂ ತಮ್ಮನಿಗೂ ಶಾಕ್!

ಬಳ್ಳಾರಿ: ಪ್ರತ್ಯೇಕ ಪಕ್ಷ ಕಟ್ಟಿ ರಾಜ್ಯ ರಾಜಕಾರಣದಲ್ಲಿ ಹೊಸ ಅಧ್ಯಾಯ ಬರೆದಿರುವ ಗಾಲಿ ಜನಾರ್ದನ ರೆಡ್ಡಿ ಈಗ ತಮ್ಮ ಸ್ನೇಹಿತ ಶ್ರೀರಾಮುಲುಗೆ ಹಾಗೂ ಸಹೋದರ ಸೋಮಶೇಖರ್ ರೆಡ್ಡಿಗೆ ಜನಾರ್ದನರೆಡ್ಡಿ ಮಾಸ್ಟರ್ ಸ್ಟ್ರೋಕ್ ನೀಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ಶ್ರೀರಾಮುಲು ಆಪ್ತ ಹಾಗೂ ಬಳ್ಳಾರಿ ಬಿಜೆಪಿಯ ಪ್ರಭಾವಿ ನಾಯಕನನ್ನ ಸೆಳೆಯುವಲ್ಲಿ ಜನಾರ್ದನ ರೆಡ್ಡಿಗೆ ಯಶಸ್ಸು ಲಭಿಸಿದೆ. ಬಿಜೆಪಿ ನಾಯಕ ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿರುವ ಗೋನಾಳ್ ರಾಜಶೇಖರ ಗೌಡರನ್ನ ಜನಾರ್ದನರೆಡ್ಡಿ ಸೆಳೆದಿದ್ದು ಈ ಮೂಲಕ ಬಿಜೆಪಿಗೆ ಶಾಕ್ ನೀಡಿದ್ದಾರೆ.
ರಾಜಶೇಖರ ಗೌಡ, ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘದ ಖಚಾಂಚಿ ಮತ್ತು ಎಸ್. ಕೆ ಮೋದಿ ನ್ಯಾಷನಲ್ ಸ್ಕೂಲ್ ಅಧ್ಯಕ್ಷರಾಗಿಯೂ ಇದ್ದಾರೆ. 2013ರ ಚುನಾವಣೆಯಲ್ಲಿ ಕುಷ್ಟಗಿ ಕ್ಷೇತ್ರದಿಂದ ಬಿಎಸ್ಆರ್ ಪಕ್ಷದಿಂದ ಸ್ಪರ್ಧಿಸಿ ಅಲ್ಪ ಅಂತರದಿಂದ ರಾಜಶೇಖರ ಗೌಡ ಸೋತಿದ್ದರು.
ರಾಜಶೇಖರಗೌಡರ ಮೂಲಕ ಬಳ್ಳಾರಿ ನಗರ ಕ್ಷೇತ್ರದಲ್ಲಿರೋ ಲಿಂಗಾಯತ ಮತಗಳನ್ನು ಸೆಳೆಯಲು ಜನಾರ್ದನ ರೆಡ್ಡಿ ಪ್ಲಾನ್ ಮಾಡಿದ್ದು ಅವರನ್ನು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬಳ್ಳಾರಿ ಜಿಲ್ಲೆಯ ಜಿಲ್ಲಾಧ್ಯಕ್ಷರನ್ನಾಗಿ ಜನಾರ್ದನ ರೆಡ್ಡಿ ನೇಮಿಸಿದ್ದಾರೆ.
ಕೌಟುಂಬಿಕ ಕಲಹ ಬೇಡ ಮತ್ತು ಲಿಂಗಾಯತರಿಗೆ ಪ್ರಾಧಾನ್ಯತೆ ನೀಡಬೇಕೆಂದು ಈ ಪ್ಲಾನ್ ರೆಡ್ಡಿ ಮಾಡಿದ್ದು ಬಳ್ಳಾರಿ ನಗರ ಕ್ಷೇತ್ರದಿಂದ ರಾಜಶೇಖರ ಗೌಡರನ್ನ KRPP ಪಕ್ಷದ ಅಭ್ಯರ್ಥಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪತ್ನಿ ಅರುಣಾರನ್ನ ಬಳ್ಳಾರಿ ನಗರ ಕ್ಷೇತ್ರದಿಂದ ಸ್ಪರ್ಧೆಗಿಳಿಸಲು ತಯಾರಿ ನಡೆಸಿದ್ದ ರೆಡ್ಡಿ, ಈಗ ಪ್ಲಾನ್ ಚೇಂಜ್ ಮಾಡಿ ರಾಜಶೇಖರ ಗೌಡರನ್ನು ಕಣಕ್ಕಿಳಿಸುವ ತಯಾರಿ ನಡೆಸಿದ್ದಾರೆ. ಹೇಗಾದ್ರು ಮಾಡಿ ಬಳ್ಳಾರಿ ನಗರ ಕ್ಷೇತ್ರವನ್ನು ಬಿಡಬಾರದು ಎನ್ನುವ ಉದ್ದೇಶದಿಂದ ರೆಡ್ಡಿ ಭರ್ಜರಿ ಪ್ಲಾನ್ ಮಾಡುತ್ತಿದ್ದಾರೆ.