ಮಲೆ ಮಾದೇಶ್ವರ ಬೆಟ್ಟಕ್ಕೆ ಗೂಡ್ಸ್ ವಾಹನಗಳಲ್ಲಿ ಜನರ ಸಾಗಣೆ ನಿರ್ಬಂಧಕ್ಕೆ ಆಗ್ರಹ

ಮಲೆ ಮಾದೇಶ್ವರ ಬೆಟ್ಟಕ್ಕೆ ಗೂಡ್ಸ್ ವಾಹನಗಳಲ್ಲಿ ಜನರ ಸಾಗಣೆ ನಿರ್ಬಂಧಕ್ಕೆ ಆಗ್ರಹ

ನೂರು :ಸರಕು ಸಾಗಣೆ ವಾಹನ, ಗೂಡ್ಸ್ ಆಟೋಗಳಲ್ಲಿ ಮಲೆ ಮಾದೇಶ್ವರ ಬೆಟ್ಟಕ್ಕೆ ತೆರಳುವುದನ್ನು ನಿಷೇಧಿಸುವಂತೆ ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.

ಜಿಲ್ಲಾಡಳಿತ ಈಗಾಗಲೇ ಸಂಚಾರ ದಟ್ಟಣೆ ಹಾಗೂ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಫೆ 17ರ ಬೆಳಗ್ಗೆ 6 ಗಂಟೆಯಿಂದ 21ರ ರಾತ್ರಿ 7:00ವರೆಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ದ್ವಿಚಕ್ರ ವಾಹನಗಳನ್ನು ನಿಷೇಧ ಮಾಡಲಾಗಿದೆ.

ಅದೇ ರೀತಿ ಸರಕು ಸಾಗಣೆ ವಾಹನಗಳಲ್ಲಿ ಯಥೇಚ್ಛವಾಗಿ ಭಕ್ತರ ಮಲೆ ಮಾದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದಾರೆ. ಗೂಡ್ಸ್ ವಾಹನಗಳಲ್ಲಿ ಚಾಲಕನಿಗೆ ಮಾತ್ರ ವಿಮೆ ಇರುವುದರಿಂದ ಯಾವುದಾದರೂ ಅನಾಹುತಗಳು ಸಂಭವಿಸಿದ್ದಲ್ಲಿ ಇತರರಿಗೆ ಯಾವುದೇ ವಿಮೆ ಇರುವುದಿಲ್ಲ, ಆದ್ದರಿಂದ ಜಿಲ್ಲಾಡಳಿತ ಭಕ್ತರ ಹಿತದೃಷ್ಟಿಯಿಂದ ಸರಕು ಸಾಗಣೆ ವಾಹನಗಳಲ್ಲಿ ಮಲೆ ಮಾದೇಶ್ವರ ಬೆಟ್ಟಕ್ಕೆ ತೆರಳುವುದನ್ನು ನಿಷೇಧಿಸುವಂತೆ ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.

ಮೂರು ಚಕ್ರದ ಆಟೋಗಳಲ್ಲಿ ಹೆಚ್ಚಿನ ಭಕ್ತರು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದಾರೆ. ಜಾತ್ರಾ ಸಂದರ್ಭಗಳಲ್ಲಿ ಆಟೋ ಪಲ್ಟಿ ಯಾಗಿ ಹಲವು ಸಾವು ನೋವು ಆಗಿರುವುದರಿಂದ ಜಿಲ್ಲಾಡಳಿತ ಸರಕು ಸಾಗಣೆ ವಾಹನಗಳನ್ನು ನಿಷೇಧ ಮಾಡಬೇಕು ಎಂದು ಸ್ಥಳೀಯರಾದ ಚೇತನ್ ಒತ್ತಾಯಿಸಿದ್ದಾರೆ.