ಮನೆಯಿಂದಲೇ ಮತದಾನಕ್ಕೆ ಡಿಕೆಶಿ ಆಕ್ಷೇಪ : ಚುನಾವಣಾ ಆಯೋಗಕ್ಕೆ ದೂರು ನೀಡಲು ನಿರ್ಧಾರ

ಮನೆಯಿಂದಲೇ ಮತದಾನಕ್ಕೆ ಡಿಕೆಶಿ ಆಕ್ಷೇಪ : ಚುನಾವಣಾ ಆಯೋಗಕ್ಕೆ ದೂರು ನೀಡಲು ನಿರ್ಧಾರ

ಬೆಂಗಳೂರು ಹದಿನಾರನೇ ಕರ್ನಾಟಕ ರಾಜ್ಯ ವಿಧಾನಸಭೆಗೆ ಇಂದು ದಿನಾಂಕವನ್ನು ನಿಗದಿ ಮಾಡಲಾಗಿದೆ. ಒಟ್ಟು ಒಂದೇ ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ. ಅಂಗವಿಕಲರಿಗೆ, ವೃದ್ದರಿಗೆ ಮನೆಯಿಂದ ಮತದಾನಕ್ಕೆ ಅವಕಾಶ ನೀಡಲಾಗಿದ್ದು, ಮನೆಯಿಂದಲೇ ಮತದಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಲು ನಿರ್ಧರಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು ಅಂಗವಿಕಲರು, ವೃದ್ದರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಿರುವುದು ಸರಿಯಲ್ಲ, ಬಿಜೆಪಿ ಚುನಾವಣಾ ಆಯೋಗವನ್ನು ಬಳಸಿಕೊಂಡು ಚುನಾವಣಾ ದುರ್ಬಳಿಕೆ ಮಾಡುವ ಸಾಧ್ಯತೆ ಇದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ರಾಜ್ಯದಲ್ಲಿ ಸುಮಾರು 12 ಲಕ್ಷಕ್ಕೂ ಹೆಚ್ಚು ವೃದ್ದ ಹಾಗೂ ಅಂಗವಿಕಲರಿದ್ದು, ಇವರು ಮನೆಯಲ್ಲೇ ಮತದಾನ ಮಾಡಿದ್ರೆ ಅಕ್ರಮ ನಡೆಯುವ ಸಾಧ್ಯತೆ ಇದೆ, ಬಿಜೆಪಿ ಇದನ್ನು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇದೆ. ಈ ಸಂಬಂಧ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಡಿಕೆಶಿ ಹೇಳಿದ್ದಾರೆ.

ನೆಲಮಂಗಲದ ಬಳಿ ಅಕ್ರಮವಾಗಿ ಟ್ಯಾಂಕರ್ ನಲ್ಲಿ ಸಾಗಿಸುತ್ತಿದ್ದ 30 ಸಾವಿರ ಲೀಟರ್ ಸ್ಪಿರಿಟ್ ಸೀಜ್

ಬೆಂಗಳೂರು: ಜಿಲ್ಲೆಯ ಗ್ರಾಮಾಂತರದ ನೆಲಮಂಗಲದ ಬಳಿಯಲ್ಲಿ ಟ್ಯಾಂಕರ್ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದಂತ 30 ಸಾವಿರ ಲೀಟರ್ ಸ್ಪಿರೀಟ್ ಅನ್ನು ಅಬಕಾರಿ ಪೊಲೀಸರು ಸೀಜ್ ಮಾಡಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಯ ಬೆನ್ನಲ್ಲೇ ಎಲ್ಲೆಡೆ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಪ್ರತಿ ವಾಹನಗಳನ್ನು ತಪಾಸಣೆಗೊಳಿಸುತ್ತಿದ್ದಾರೆ. ಹೀಗೆ ಬೆಂಗಳೂರು ಗ್ರಾಮಾತಂರದ ನೆಲಮಂಗಲದ ಜಾಸ್ ಟೋಲ್ ನಲ್ಲಿ ಟ್ಯಾಂಕ್ ಒಂದನ್ನು ಅಬಕಾರಿ ಪೊಲೀಸರು ಪರಿಶೀಲಿಸಿದ್ದಾರೆ.ಟ್ಯಾಂಕರ್ ನಲ್ಲಿ 30 ಸಾವಿರ ಸ್ಪಿರೀಟ್ ಇದ್ದದ್ದನ್ನು ಕಂಡು, ಚಾಲಕ ಶ್ರೀಧರ್ ಅನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಸರಿಯಾಗಿ ಉತ್ತರಿಸದ ಕಾರಣ, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಅಂದಹಾಗೆ ಟ್ಯಾಂಕರ್ ನಲ್ಲಿ 30 ಸಾವಿರ ಸ್ಪಿರೀಟ್ ಅನ್ನು ದಬಾಸ್ ಪೇಟೆಯಿಂದ ಬೆಂಗಳೂರು ಕಡೆಗೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಬಕಾರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.