ಚುನಾವಣೆ'ಗಾಗಿ ಪಡೆಯುವ ವಾಹನಗಳಿಗೆ 'ಬಾಡಿಗೆ ದರ ನಿಗದಿ'ಪಡಿಸಿ ರಾಜ್ಯ ಸರ್ಕಾರ ಆದೇಶ
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯ ಬೆನ್ನಲ್ಲೇ, ಸರ್ಕಾರಿ, ಖಾಸಗಿ, ಗೂಡ್ಸ್, ಟ್ಯಾಕ್ಸಿಗಳಿಗೆ ಸರ್ಕಾರ ಬಾಡಿಗೆ ದರ ನಿಗದಿಪಡಿಸಿ ಆದೇಶಿಸಿದೆ.
ಈ ಸಂಬಂಧ ಆದೇಶ ಹೊರಡಿಸಿರುವಂತ ರಾಜ್ಯ ಸರ್ಕಾರವು ಚುನಾವಣೆಗಾಗಿ ಸರ್ಕಾರಿ, ಖಾಸಗಿ ವಾಹನಗಳನ್ನು ಬಾಡಿಗೆ ಪಡೆಯಲಾಗುತ್ತದೆ.
ಹೀಗಿದೆ ಕೆ ಎಸ್ ಆರ್ ಟಿ ಸಿ, NWKRTC, NEKRTC ಹಾಗೂ BMTC ಬಾಡಿಗೆ ದರ
ಪ್ರತಿ ಕಿಲೋಮೀಟರ್ ಗೆ ರೂ.57.50 ದರವನ್ನು ನಿಗದಿ ಪಡಿಸಲಾಗಿದೆ. ಒಂದು ದಿನಕ್ಕೆ ರೂ.11,500ರಷ್ಟ ಹಣ ನೀಡಬೇಕು. ಮುಂಗಡವಾಗಿ ಹಣ ನೀಡಬೇಕು. ಎರಡು ಗಂಟೆಗೂ ಹೆಚ್ಚು ಸಮಯ ಆದ್ರೇ ಒಂದು ದಿನದ ಲೆಕ್ಕದಲ್ಲಿ ಬಾಡಿಗೆ ನೀಡಬೇಕು.
ಬೆಂಗಳೂರು ವ್ಯಾಪ್ತಿಯ ಖಾಸಗಿ ವಾಹನಗಳಿಗೆ ದರ
35+1 ಸೀಟ್ ಕ್ಯಪಾಸಿಟಿ ಹೊಂದಿರುವಂತ ವಾಹನಗಳಿಗೆ ಪ್ರತಿ ಕಿಲೋಮೀಟರ್ ಗೆ ರೂ.43.50. ಒಂದು ದಿನಕ್ಕೆ 8,700 ಬಾಡಿಗೆ ದರ ನೀಗದಿ. ಬಾಡಿಗೆ ಪಡೆದು ಬಳಕೆ ಮಾಡದ ವಾಹನಗಳಿಗೆ ರೂ.4,350 ನೀಡುವುದು.
ಬೆಂಗಳೂರು ಹೊರತುಪಡಿಸಿ ಖಾಸಗಿ ವಾಹನಗಳಿಗೆ ದರ
ಬೆಂಗಳೂರು ನಗರ ಹೊರತುಪಡಿಸಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಚುನಾವಣಾ ಕಾರ್ಯಕ್ಕೆ ವಾಹನ ಬಾಡಿಗೆ ಪಡೆದ್ರೇ ಪ್ರತಿ ಕಿಲೋಮೀಟರ್ ಗೆ ರೂ.42.50, ದಿನದ ಬಾಡಿಗೆ ದರ 8200 ರೂ. ಬಾಡಿಗೆ ಪಡೆದು ಬಳಕೆ ಮಾಡದೇ ಇದ್ದರೇ ರೂ.5200 ನಿಗದಿ.
ಬೆಂಗಳೂರು ವ್ಯಾಪ್ತಿಯ ಲಘು ಗೂಡ್ಸ್ ವಾಹನಗಳ ದರ
ಪ್ರತಿ ಕಿಲೋ ಮೀಟರ್ ಗೆ ರೂ.29, ದಿನದ ಬಾಡಿಗೆ ರೂ.2,900. ಒಂದು ಗಂಟೆಗೆ ರೂ.200. ರೂ.2,900 ದಿನದ ಬಾಡಿಗೆ.
ಬೆಂಗಳೂರು ಹೊರತು ಪಡಿಸಿ ಲಘು ಗೂಡ್ಸ್ ವಾಹನಗಳ ದರ
ಪ್ರತಿ ಕಿಲೋಮೀಟರ್ ಗೆ ರೂ.29, ದಿನಕ್ಕೆ ರೂ.2,900. ಗಂಟೆಗೆ ರೂ.190, 2,900 ದಿನದ ಬಾಡಿಗೆ ನಿಗದಿ.
ಬೆಂಗಳೂರು ಸಿಟಿಗೆ ಮ್ಯಾಕ್ಸಿ ಕ್ಯಾಬ್ ಗಳಿಗೆ ದರ
ಪ್ರತಿ ಕಿಲೋಮೀಟರ್ ಗೆ ರೂ.20, ದಿನದ ಬಾಡಿಗೆ ರೂ.4000. ಬಾಡಿಗೆ ಪಡೆದು ಬಳಕೆ ಮಾಡದೇ ಇದ್ದರೇ ರೂ.35,00. ಗಂಟೆಯ ಲೆಕ್ಕದಲ್ಲಿ ರೂ.220, ರೂ.3,200 ದಿನದ ಬಾಡಿಗೆ
ಬೆಂಗಳೂರು ನಗರ ಹೊರತುಪಡಿಸಿ ಮ್ಯಾಕ್ಸಿ ಕ್ಯಾಬ್ ಗಳಿಗೆ ದರ
ಪ್ರತಿ ಕಿಲೋಮೀಟರ್ ಗೆ ರೂ.19, ದಿನದ ಬಾಡಿಗೆ ರೂ.3,800. ಬಳಕೆ ಮಾಡದೇ ಇದ್ದರೂ ರೂ.3,400 ಬಾಡಿಗೆ ನೀಡಬೇಕು. ಗಂಟೆಯ ಲೆಕ್ಕದಲ್ಲಿ ರೂ.210, 3050 ದಿನಕ್ಕೆ ಬಾಡಿಗೆ ನೀಡುವುದು ಕಡ್ಡಾಯ.
ಬೆಂಗಳೂರು ನಗರ ವ್ಯಾಪ್ತಿಯ ಗೂಡ್ಸ್ ವಾಹನಗಳಿಗೆ ದರ
ಪ್ರತಿ ಕಿಲೋಮೀಟರ್ ಗೆ ರೂ.34. ದಿನದ ಬಾಡಿಗೆ ದರ ರೂ.6000. 1000 ಒಂದು ಗಂಟೆಗೆ. ಇದು ನಾಲ್ಕು ಗಂಟೆಯವರೆಗೆ. ಆನಂತ್ರ ಪ್ರತಿ ಕಿಲೋಮೀಟರ್ ಗೆ ರೂ.34 ನಿಗದಿ
ಬೆಂಗಳೂರು ನಗರ ಹೊರತುಪಡಿಸಿ ಇತರೆ ಜಿಲ್ಲೆಗಳ ಗೂಡ್ಸ್ ವಾಹನ ಬಾಡಿಗೆ ದರ
ಪ್ರತಿ ಕಿಲೋಮೀಟರ್ ಗೆ ರೂ.34. ದಿನದ ಬಾಡಿಗೆ ದರ ರೂ.6000. ಒಂದು ಗಂಟೆಗೆ ಒಂದು ಸಾವಿರ. 4 ಗಂಟೆಗೂ ಹೆಚ್ಚು ಆದ್ರೇ ರೂ.34 ಪ್ರತಿ ಕಿಲೋಮೀಟರ್ ಗೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮೋಟರ್ ಕ್ಯಾಬ್ ಗಳಿಗೆ ದರ ( 6+1 ಸೀಟ್)
ಪ್ರತಿ ಕಿಲೋಮೀಟರ್ ಗೆ ರೂ.16. ದಿನದ ಬಾಡಿಗೆ ದರ ರೂ.2800. ಬಾಡಿಗೆ ಪಡೆದು ಬಳಕೆ ಮಾಡದೇ ಇದ್ದರೇ 2000 ರೂ ಫಿಕ್ಸ್.
ಬೆಂಗಳೂರು ಹೊರತುಪಡಿಸಿ ಮೋಟಾರ್ ಕ್ಯಾಬ್ ಗಳ ಬಾಡಿಗೆ ಧರ ( 6+1 ಸೀಟ್)
ಪ್ರತಿ ಕಿಲೋಮೀಟರ್ ಗೆ ರೂ.14.5 ನಿಗದಿ. 2700 ಒಂದು ದಿನದ ಬಾಡಿಗೆ. ಬಳಕೆ ಮಾಡದೇ ಇದ್ದರೇ ರೂ.1550 ನೀಡಬೇಕು