ರಾಜ್ಯದಲ್ಲಿ ಶುರುವಾಯ್ತು ;ಮದ್ಯಪಾನ ಪ್ರಿಯರ ಹೋರಾಟ; ಸರ್ಕಾರಕ್ಕೆ ಅವರ ಬೇಡಿಕೆಗಳು ಏನು ಗೊತ್ತಾ?vvvvvv

ರಾಜ್ಯದಲ್ಲಿ ಶುರುವಾಯ್ತು ;ಮದ್ಯಪಾನ ಪ್ರಿಯರ ಹೋರಾಟ; ಸರ್ಕಾರಕ್ಕೆ ಅವರ ಬೇಡಿಕೆಗಳು ಏನು ಗೊತ್ತಾ?vvvvvv

ಹಾಸನ: ಹಾಸನದಲ್ಲಿ ನೂತನವಾಗಿ ಮದ್ಯಪಾನ ಪ್ರಿಯರ ಹೋರಾಟ ಸಂಘ ಶುರುವಾಗಿದ್ದು, ಈ ನಡುವೆ ಸರ್ಕಾರದ ವಿರುದ್ದ ಮದ್ಯಪಾನ ಪ್ರಿಯರ ಹೋರಾಟ ಸಂಘದವರು ಕಿಡಿಕಾರಿದ್ದಾರೆ. ಹಾಸನದಲ್ಲಿ ಈ ಬಗ್ಗೆ ಮಾಧ್ಯಮವದರ ಜೊತೆಗೆ ಮಾತನಾಡಿದ ಸಂಘದ ಸದ್ಯಸರು ನಮಗೆ ಯಾವುದೇ ರೀತಿಯಲ್ಲಿ ಸರ್ಕಾರ ನರೆವಿಗೆ ನಿಂತಿಲ್ಲ, ನಮ್ಮಿಂದಲೇ ಸರ್ಕಾರ ನಡೆಯುತ್ತಿದ್ದು, ನಮಗೆ ಬಾಟಲ್‌ ಮೇಲೆ ಇನ್ಯೂಶ್ಯುರೆನ್ಸ್‌ ಮಾಡಿಸಬೇಕು.

ನಾವು ಏನು ಆದ್ರು ಸತ್ತರೆ ನಮ್ಮ ಕುಟುಂಬಕ್ಕೆ ಪರಿಹಾರ ನೀಡಬೇಕು ಅಂತ ಒತ್ತಾಯ ಮಾಡಿದರು.

ಇದೇ ವೇಳೆ ನಾವು ಕುಡಿದು ಮನೆಯಲ್ಲಿ ಗಲಾಟೆ ಮಾಡುವುದರಿಂದ ಇದರಿಂದ ನಮ್ಮ ಮಕ್ಕಳಿಗೆ ತೊಂದ್ರೆಯಾಗುತ್ತದೆ, ಹೀಗಾಗಿ ಹಾಸ್ಟೆಲ್‌ ನಲ್ಲಿ ನಮ್ಮ ಮಕ್ಕಳಗಳಿಗೆ ಹಾಸ್ಟೆಲ್‌ ನಲ್ಲಿ ವಸತಿ ನೀಡಬೇಕು ಅಂತ ಹೇಳಿದರು. ಇದಲ್ಲದೇ ನಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಲಿವರ್‌ ಡ್ಯಾಮೇಜ್ ಆದ್ರೆ ಸರ್ಕಾರ ಆಪರೇಶನ್‌ಗೆ ಸಾವಿರಾರು ಹಣ ಖರ್ಚಾಗುತ್ತದೆ. ಇದಲ್ಲದೇ ನಮಗೆ ಮೂರು ತಿಂಗಳಿಗೆ ಒಂದು ಸಾರಿ ನಮ್ಮ ಆರೋಗ್ಯ ತಪಾಸಣೆ ಮಾಡಬೇಕು ಇದಲ್ಲದೇ ಮದ್ಯಪಾನ ಅಂಗಡಿಗಳಲ್ಲಿ ಫಿಲ್ಟರ್‌ ನೀರು ಕೊಡಬೇಕು, ಕುಡಿದು ಟೈಟ್‌ ಆದ ವೇಳೆಯಲ್ಲಿ ಮದ್ಯಪಾನ ಮಾಡಿದವರಿಗೆ ಅಂಗಡಿಗಳಲ್ಲಿ ರೆಸ್ಟ್‌ ಮಾಡಲು ಅವಕಾಶ ನೀಡಬೇಕು ಅಂತ ಒತ್ತಾಯಿಸಿದ್ದಾರೆ.