ICICI ಬ್ಯಾಂಕ್ ಮಾಜಿ CEO ಚಂದಾ ಕೊಚ್ಚರ್, ಪತಿಯನ್ನು ಕೋರ್ಟಿಗೆ ಹಾಜರುಪಡಿಸಿದ CBI : 3 ದಿನ ಕಸ್ಟಡಿಗೆ ಮನವಿ |

ICICI ಬ್ಯಾಂಕ್ ಮಾಜಿ CEO ಚಂದಾ ಕೊಚ್ಚರ್, ಪತಿಯನ್ನು ಕೋರ್ಟಿಗೆ ಹಾಜರುಪಡಿಸಿದ CBI : 3 ದಿನ ಕಸ್ಟಡಿಗೆ ಮನವಿ |

ವದೆಹಲಿ : ಕೇಂದ್ರೀಯ ತನಿಖಾ ದಳ (CBI) ಶನಿವಾರ ಐಸಿಐಸಿಐ (ICIC) ಬ್ಯಾಂಕ್‌ ಮಾಜಿ ಸಿಇಒ ಚಂದಾ (Chanda Kochhar) ಕೊಚ್ಚರ್ ಮತ್ತು ಅವರ ಪತಿ ದೀಪಕ್ ಕೊಚ್ಚರ್ ಅವರನ್ನು ಮುಂಬೈನ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಈ ವೇಳೆ ಮೂರು ದಿನಗಳ ಕಾಲ ಕಸ್ಟಡಿಗೆ ಕೋರಿದೆ.

ಸಾಲ ವಂಚನೆ ಪ್ರಕರಣದಲ್ಲಿ ಚಂದಾ ಕೊಚ್ಚರ್ ಮತ್ತು ಆಕೆಯ ಪತಿಯನ್ನು ನಿನ್ನೆ ಬಂಧಿಸಲಾಗಿತ್ತು.

ಅವರಿಬ್ಬರೂ ತನಿಖೆಗೆ ಸಹಕರಿಸಲಿಲ್ಲ ಹೀಗಾಗಿ ಬಂಧಿಸಲಾಗಿದೆ ಎಂದು ಕೇಂದ್ರ ತನಿಖಾ ಸಂಸ್ಥೆ ನ್ಯಾಯಾಲಯಕ್ಕೆ ತಿಳಿಸಿದೆ.

2012ರಲ್ಲಿ ವಿಡಿಯೋಕಾನ್ ಗ್ರೂಪ್‌ಗೆ ಐಸಿಐಸಿಐ ಬ್ಯಾಂಕ್ ಮಂಜೂರು ಮಾಡಿದ ಸಾಲದಲ್ಲಿ ವಂಚನೆ ಮತ್ತು ಅಕ್ರಮಗಳಿಗೆ ಸಂಬಂಧಿಸಿದಂತೆ ಚಂದಾ ಕೊಚ್ಚರ್ ಮತ್ತು ಅವರ ಪತಿ ದೀಪಕ್ ಕೊಚ್ಚಾರ್ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

ಕ್ರಿಮಿನಲ್ ಪಿತೂರಿ ಮತ್ತು ನಿಬಂಧನೆಗಳಿಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಚಂದಾ ಕೊಚ್ಚರ್, ಅವರ ಪತಿ ಮತ್ತು ವಿಡಿಯೋಕಾನ್ ಗ್ರೂಪ್‌ನ ವೇಣುಗೋಪಾಲ್ ಧೂತ್, ನುಪವರ್ ರಿನ್ಯೂಬಲ್ಸ್, ಸುಪ್ರೀಮ್ ಎನರ್ಜಿ, ವಿಡಿಯೋಕಾನ್ ಇಂಟರ್‌ನ್ಯಾಶನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ವಿಡಿಯೋಕಾನ್ ಇಂಡಸ್ಟ್ರೀಸ್ ಲಿಮಿಟೆಡ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.