ಮಂಡ್ಯದಲ್ಲಿ ಮುಂದುವರಿದ `ಗೋ ಬ್ಯಾಕ್ ಅಶೋಕ್' ಅಭಿಯಾನ

ಮಂಡ್ಯ : ಕಂದಾಯ ಸಚಿವ ಆರ್. ಅಶೋಕ್ ಅವರನ್ನು ಮಂಡ್ಯ ಜಿಲ್ಲೆಗೆ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಮಂಡ್ಯದಲ್ಲಿ ಮತ್ತೆ ಗೋ ಬ್ಯಾಕ್ ಅಶೋಕ್ ಎಂದು ಬರಹ ಬರೆಯಲಾಗಿದೆ.
ಮಂಡ್ಯದಲ್ಲಿ ಅಶೋಕ್ ಗೋ ಬ್ಯಾಕ್ ಅಭಿಯಾನ ಮುಂದುವರೆದಿದ್ದು, ಬೆಂಗಳೂರು-ಮೈಸೂರು ಹೆದ್ದಾರಿಯ ಫ್ಲೈಓವರ್ ಕೆಳಗೆ ಅಪರಿಚಿತರು ಗೋ ಬ್ಯಾಕ್ ಅಶೋಕ್ ಎಂದು ಕೈ ಬರಹ ಬರೆಯಲಾಗಿದೆ. ಈ ಹಿಂದೆ ಮಂಡ್ಯದಲ್ಲಿ ಗೋಡೆಗಳ ಮೇಲೆಯೂ ಅಶೋಕ್ ಗೋ ಬ್ಯಾಕ್ ಎಂಬ ಪೋಸ್ಟರ್ ಅಂಟಿಸಿ ಆಕ್ರೋಶವನ್ನು ಹೊರಹಾಕಲಾಗಿದೆ.
ಇನ್ನು ಮಂಡ್ಯದಲ್ಲಿ ಉಸ್ತುವಾರಿ ಸಚಿವ ಆರ್. ಅಶೋಕ್ ಗೋಬ್ಯಾಕ್ ಪೋಸ್ಟರ್ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಿಎಂ ಬೊಮ್ಮಾಯಿ, ಉಸ್ತುವಾರಿ ನೇಮಕಕ್ಕೆ ಮಂಡ್ಯದಲ್ಲಿ ಸ್ವಪಕ್ಷದವರಿಂದ ಯಾವುದೇ ವಿರೋಧಿಇಲ್ಲ. ಆರ್. ಅಶೋಕ್ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.