ಭಾರತ, ಬ್ರಿಟನ್ ಹೊಸ ವೀಸಾ ಯೋಜನೆ ಮುಂದಿನ ತಿಂಗಳು ಜಾರಿ; ಯುವ ಉದ್ಯೋಗಿಗಳಿಗೆ ಪ್ರಯೋಜನ

ಭಾರತ, ಬ್ರಿಟನ್ ಹೊಸ ವೀಸಾ ಯೋಜನೆ ಮುಂದಿನ ತಿಂಗಳು ಜಾರಿ; ಯುವ ಉದ್ಯೋಗಿಗಳಿಗೆ ಪ್ರಯೋಜನ
ನವದೆಹಲಿ: ಭಾರತದ (India) 18ರಿಂದ 30 ವರ್ಷ ವಯಸ್ಸಿನ ಯುವ ವೃತ್ತಿಪರರಿಗೆ ಎರಡು ವರ್ಷಗಳ ಕಾಲ ಬ್ರಿಟನ್​ನಲ್ಲಿ ನೆಲೆಸಲು ಮತ್ತು ಉದ್ಯೋಗ ಮಾಡಲು ಅವಕಾಶ ಕಲ್ಪಿಸುವ 'ಯುಕೆ-ಭಾರತ ಯುವ ವೃತ್ತಿಪರರ ವೀಸಾ ಯೋಜನೆ' 2023ರ ಫೆಬ್ರವರಿ 28ರಿಂದ ಜಾರಿಗೆ ಬರಲಿದೆ. ಇದರಿಂದ ಸಾವಿರಾರು ಯುವ ವೃತ್ತಿಪರರಿಗೆ ನೆರವಾಗಲಿದೆ. ಯೋಜನೆಯಡಿ, ಬ್ರಿಟನ್​ನ ವೃತ್ತಿಪರರು ಉದ್ಯೋಗದ ಕಾರಣಗಳಿಗಾಗಿ ಭಾರತಕ್ಕೆ ಬಂದು ನೆಲೆಸಲು ಮತ್ತು ಇಲ್ಲಿ ಉದ್ಯೋಗ ನಿರ್ವಹಿಸಲೂ ಅವಕಾಶವಿದೆ ಎಂದು ಯುಕೆ-ಇಂಡಿಯಾ ಫಾರಿನ್ ಆಫೀಸ್ ಕನ್​​ಸಲ್ಟೇಷನ್ಸ್ (FOC) ಪ್ರಕಟಣೆ ತಿಳಿಸಿದೆ. 2022ರ ಜೂನ್​ಗೆ ಕೊನೆಗೊಂಡಂತೆ 12 ತಿಂಗಳ ಅವಧಿಯಲ್ಲಿಬ್ರಿಟನ್ ಪ್ರಧಾನಿಗಳ ಕಾರ್ಯಾಲಯ ನೀಡಿರುವ ಮಾಹಿತಿ ಪ್ರಕಾರ, ಯುಕೆ-ಭಾರತ ಯುವ ವೃತ್ತಿಪರರ ವೀಸಾ ಯೋಜನೆ ಯೋಜನೆಯ ಅಡಿಯಲ್ಲಿ, ಪದವಿ ಪಡೆದ 18ರಿಂದ 30 ವರ್ಷ ವಯಸ್ಸಿನ ಭಾರತೀಯರಿಗೆ ಪ್ರತಿ ವರ್ಷ 3,000 ವೀಸಾ ನೀಡಲಾಗುತ್ತದೆ. ಈ ಯೋಜನೆಯಡಿ ವೀಸಾ ಪಡೆದವರು ಬ್ರಿಟನ್​ಗೆ ತೆರಳಿ ಅಲ್ಲಿ ಕೆಲಸ ಮಾಡಬಹುದಾಗಿದೆ ಹಾಗೂ 2 ವರ್ಷಗಳ ವರೆಗೆ ವಾಸಿಸಬಹುದಾಗಿದೆ.