ಭಾಗ್ಯದ ನಿಧಿ ತುಂಬಿ ತುಳಿಕತಲೇ ಪರಾಕ್' : ಮೈಲಾರ ಕಾರ್ಣಿಕದಲ್ಲಿ ಗೊರವಯ್ಯ ಭವಿಷ್ಯ

ಭಾಗ್ಯದ ನಿಧಿ ತುಂಬಿ ತುಳಿಕತಲೇ ಪರಾಕ್' : ಮೈಲಾರ ಕಾರ್ಣಿಕದಲ್ಲಿ ಗೊರವಯ್ಯ ಭವಿಷ್ಯ

ರಪನಹಳ್ಳಿ : ಭಾಗ್ಯದ ನಿಧಿ ತುಂಬಿ ತುಳಿಕತಲೇ ಪರಾಕ್' ಎಂದು ಇತಿಹಾಸ ಪ್ರಸಿದ್ದ ದೊಡ್ಡಮೈಲಾರ ಲಿಂಗೇಶ್ವರ ಸ್ವಾಮಿ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ಕೋಟೆಪ್ಪ ಭವಿಷ್ಯ ನುಡಿದಿದೆ.

ಪಟ್ಟಣದ ಹೊರವಲಯದಲ್ಲಿ ಭಾನುವಾರ ನಡೆದ ಇತಿಹಾಸ ಪ್ರಸಿದ್ದ ದೊಡ್ಡ ಮೈಲಾರ ಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ಕೋಟೆಪ್ಪ ಭವಿಷ್ಯ ನುಡಿದಿದೆ.

ಭಾಗ್ಯದ ನಿಧಿ ತುಂಬಿ ತುಳಿಕತಲೇ ಪರಾಕ್ ಅಂದರೆ ಈ ವರ್ಷವೂ ಉತ್ತಮ ಮಳೆ, ಬೆಳೆಯಾಗಿ ಸಮೃದ್ಧಿ ನೆಲೆಸಲಿದೆ' ಎಂದು ಗೊರವಯ್ಯ ಕೋಟೆಪ್ಪ ದೈವವಾಣಿ ಭವಿಷ್ಯ ನುಡಿದಿದೆ.

ದೇವಾಲಯದ ಮುಂಭಾಗ ಸಾವಿರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಏಳು ಕೋಟೆ ಜಯಘೋಷದ ನಡುವೆ ಗೊರವಪ್ಪನ ಕಾರಣಿಕ ನುಡಿ ಕೇಳಿಬಂದಿತು. ಗೊರವಪ್ಪ ಮೇಲಿನಂತೆ ಕಾರಣಿಕ ನುಡಿದು ಹಿಮ್ಮುಖವಾಗಿ ಬೀಳುತ್ತಿದ್ದಂತೆಯೇ ಕೆಳಗಡೆ ನಿಂತಿದ್ದ ಗೊರವ ಸಮೂಹ ಅವರನ್ನು ಎತ್ತಿ ಹಿಡಿದರು.ಈ ಕ್ಷೇತ್ರದ ಮಹಿಮೆ ಅಪಾರ ಆ ಕ್ಷೇತ್ರದಲ್ಲಿ ಪ್ರತಿವರ್ಷ ಕಾರ್ಣಿಕ ನುಡಿಯಲಾಗುತ್ತೆ. ನುಡಿದ ಕಾರ್ಣಿಕ ಸತ್ಯವಾಗುತ್ತಲೇ ಬಂದಿದೆ ಎನ್ನುತ್ತಾರೆ ಜನ.