ಬೆಂಗಳೂರಿನಲ್ಲಿ ಸ್ನೇಹಿತನನ್ನೇ ಹತ್ಯೆಗೈದು ಮೃತದೇಹದ ಜೊತೆ ಠಾಣೆಗೆ ಆಗಮಿಸಿದ ಭೂಪ

ಬೆಂಗಳೂರಿನಲ್ಲಿ ಸ್ನೇಹಿತನನ್ನೇ ಹತ್ಯೆಗೈದು ಮೃತದೇಹದ ಜೊತೆ ಠಾಣೆಗೆ ಆಗಮಿಸಿದ ಭೂಪ

ಬೆಂಗಳೂರು: ಮಹಿಳಾ ಸೊಸೈಟಿ ಸೇರಿದಂತೆ‌ ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ಹಲವು ಯೋಜನೆಯಡಿ ಸಾಲ ನೀಡುವುದಾಗಿ ನಂಬಿಸಿ ಹಣ ಪಡೆದಿರುವ ವ್ಯಕ್ತಿಯನ್ನು ಹತ್ಯೆ ಮಾಡಿ, ಶವವನ್ನು ಕಾರಿನಲ್ಲಿ ಪೊಲೀಸ್ ಠಾಣೆಗೆ ತಂದು ಆರೋಪಿ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸೋಮವಾರ ರಾತ್ರಿ ವ್ಯಕ್ತಿಯೊಬ್ಬ ಕಾರಿನಲ್ಲೇ ಮೃತದೇಹವನ್ನು ಹೊತ್ತುಕೊಂಡು ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ತಂದಿದ್ದಾನೆ. ಈಗ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಅರೆಸ್ಟ್‌ ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆ;
ನಂಜನಗೂಡು ಮೂಲದ ಮಹೇಶಪ್ಪ ಹಿಂದೆ ರಾಮಮೂರ್ತಿ ನಗರದ ಜಯಂತಿ ನಗರದಲ್ಲಿ ವಾಸಿಸುತ್ತಿದ್ದ. ಈ ವೇಳೆ ರಾಜಶೇಖರನ ಪರಿಚಯವಾಗಿದ್ದು ಇಬ್ಬರು ಉತ್ತಮ ಸ್ನೇಹಿತರಾಗಿದ್ದರು.

ಬ್ಯಾಂಕ್‌ನಿಂದ ಸಾಲ ಕೊಡಿಸುವುದಾಗಿ ಹಲವಾರು ಜನರಿಂದ ಮಹೇಶಪ್ಪ ಹಣ ಪಡೆದಿದ್ದ. ಈ ಎಲ್ಲಾ ವ್ಯವಹಾರಗಳಲ್ಲೂ ರಾಜಶೇಖರ ಮತ್ತು ಆತನ ತಾಯಿ ಸುವಿಧಾ ಜೊತೆಗಿದ್ದರು. ಆದರೆ ಯಾರಿಗೂ ಸಾಲ ನೀಡದೇ ಪಡೆದ ಹಣ ವಾಪಸ್‌ ಕೊಡದೇ ಮಹೇಶಪ್ಪ ಪರಾರಿಯಾಗಿದ್ದ.
ಸಾಲ ನೀಡಿದವರು ಪ್ರಶ್ನೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ತನ್ನ ಮನೆಯನ್ನೇ ಮಾರಿ ಹಲವರಿಗೆ ಕೊಡಬೇಕಿದ್ದ ಹಣವನ್ನು ರಾಜಶೇಖರ ನೀಡಿದ್ದ. ಈ ಕಾರಣಕ್ಕೆ ಒಂದೂವರೆ ಕೋಟಿ ರೂ.ಗಾಗಿ ರಾಜಶೇಖರ ಮಹೇಶಪ್ಪನನ್ನು ಹುಡುಕಿಕೊಂಡು ಹಳ್ಳಿಗೆ ಹೋಗಿದ್ದ.