ಬಿಜೆಪಿ ಅಭ್ಯರ್ಥಿಯ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

ಬಿಜೆಪಿ ಅಭ್ಯರ್ಥಿಯ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

ಗುಜರಾತ್​​ ವಿಧಾನಸಭೆ ಮೊದಲ ಹಂತದ ಚುನಾವಣೆಯ ಮತದಾನ ಇಂದು ಬೆಳಗ್ಗೆಯಿಂದ ಪ್ರಾರಂಭವಾಗಿದ್ದು, ಈ ಮಧ್ಯೆ ವನ್ಸ್ಡಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿಯುಷ್​ ಪಟೇಲ್​ ಮೇಲೆ ಅಪರಿಚಿತರು ಹಲ್ಲೆ ನಡೆಸಿದ್ದು ವರದಿಯಾಗಿದೆ. ಪಿಯುಷ್​ ಪಟೇಲ್​ ಅವರು ಇಂದು ವನ್ಸ್ಡಾದ ಝಾರಿ ಗ್ರಾಮದಲ್ಲಿ ಇದ್ದಾಗ, ದುಷ್ಕರ್ಮಿಗಳು ಅಟ್ಯಾಕ್​ ಮಾಡಿ ಕಾರನ್ನು ಧ್ವಂಸ ಗೊಳಿಸಿದ್ದಾರೆ. ಪಟೇಲ್​ ಮೇಲೆ ದಾಳಿ ನಡೆಸಿದವರು ಕಾಂಗ್ರೆಸ್​ ಅಭ್ಯರ್ಥಿ ಅನಂತ್ ಪಟೇಲ್​​ ಅವರ ಬೆಂಬಲಿಗರು ಎಂದು ಬಿಜೆಪಿ ಆರೋಪ ಮಾಡಿದೆ.