ಬಾಗಿಲಲ್ಲಿ ನಿಲ್ಬೇಡ ಅಂದಿದ್ದೇ ತಪ್ಪಾಯ್ತು.. ಕಂಡಕ್ಟರ್, ಡ್ರೈವರ್ಗೆ ನುಗ್ಗಿ ಹೊಡೆದ ವಿದ್ಯಾರ್ಥಿಗಳು

ಕೊಪ್ಪಳ: ವಿದ್ಯಾರ್ಥಿಯೊಬ್ಬ ಸ್ಥಳೀಯರನ್ನು ಸೇರಿಸಿಕೊಂಡು ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಮತ್ತು ಡ್ರೈವರ್ ಮೇಲೆ ಹಲ್ಲೆ ಮಾಡಿರುವ ಘಟನೆ ಬೇಳಕಿಗೆ ಬಂದಿದೆ. ಯಲಬುರ್ಗಾ ತಾಲೂಕಿನ ಕುದರಿಮೋತಿ ಕ್ರಾಸ್ ಬಳಿ ನಿನ್ನೆ ಈ ಘಟನೆ ನಡೆದಿದೆ. ಬಸ್ ಬಾಗಿಲ ಬಳಿ ನಿಂತ ವಿದ್ಯಾರ್ಥಿಗೆ ಬುದ್ದಿ ಮಾತು ಹೇಳಿದ್ದಕ್ಕೆ ಕಂಡಕ್ಟರ್ ಮತ್ತು ಡ್ರೈವರ್ ಮೇಲೆ ಹಲ್ಲೆ ಮಾಡಲಾಗಿದೆ.ಕುಷ್ಟಗಿ ಬಸ್ ಡಿಪೋ ಡ್ರೈವರ್ ಹನುಮನಗೌಡ ಹಾಗೂ ಕಂಡಕ್ಟರ್ ರಾಜಸಾಬ ಕಂಬಾರ ಮೇಲೆ ಹಲ್ಲೆ ನಡೆದಿದೆ. ಕುದರಿಮೋತಿ ನಿವಾಸಿ ಗಣೇಶ್ ಹಾಗೂ ಸ್ಥಳೀಯ 7-8 ಜನರ ಗುಂಪು ಸೇರಿಕೊಂಡು ಬಸ್ ಚಾಲಕ ಮತ್ತು ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದಾರೆ.