ಶಿವಮೊಗ್ಗ : ಪರವಾನಗಿ ನವೀಕರಿಸಿಕೊಳ್ಳಲು ವರ್ತಕರಿಗೆ ಸೂಚನೆ

ಶಿವಮೊಗ್ಗ : ಪರವಾನಗಿ ನವೀಕರಿಸಿಕೊಳ್ಳಲು ವರ್ತಕರಿಗೆ ಸೂಚನೆ

ಶಿವಮೊಗ್ಗ : 2013 ರಿಂದ 2023 ನೇ ಸಾಲಿಗೆ ಲೈಸನ್ಸ್ ಪಡೆದ ಕೃಷಿ ಉತ್ಪನ್ನ ಮಾರುಕಟ್ಟೆ ವರ್ತಕರ ಪರವಾನಿಗೆ ಅವಧಿಯು 2023 ರ ಮಾರ್ಚ್ 31 ರಂದು ಮುಕ್ತಾಯಗೊಳ್ಳಲ್ಲಿದ್ದು, ಲೈಸನ್ಸ್ ನವೀಕರಿಸಲು ಇಚ್ಛಿಸುವ ಪೇಟೆ ಕಾರ್ಯಕರ್ತರು ಫೆ.28 ರ ಒಳಗಾಗಿ ನಿಗದಿತ ಲೈಸನ್ಸ್ ಫಾರಂನ್ನು ಭರ್ತಿ ಮಾಡಿ ಅವಶ್ಯಕ ದಾಖಲಾತಿಗಳೊಂದಿಗೆ ಕಾರ್ಯದರ್ಶಿ, ಎಪಿಎಂಸಿ, ಶಿವಮೊಗ್ಗ ಮತ್ತು ಉಪನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಶಿವಮೊಗ್ಗ ಇವರಿಗೆ ಸಲ್ಲಿಸತಕ್ಕದ್ದು.

ಫೆ.28 ರ ನಂತರ ಲೈಸೆನ್ಸ್ಗಳನ್ನು ನವೀಕರಿಸಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ. ಆದಕಾರಣ ಲೈಸನ್ಸ್ ನವೀಕರಣಗೊಳಿಸಿಕೊಳ್ಳುವುದರಿಂದ ಹೊರಗುಳಿದರೆ ಮುಂದಿನ ಕಾನೂನಾತ್ಮಕ ಪರಿಣಾಮಗಳಿಗೆ ತಾವೇ ನೇರ ಹೊಣೆಗಾರರಾಗಿರುತ್ತೀರಿ ಎಂದು ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ತಿಳಿಸಿರುತ್ತಾರೆ.